

ವಿರಾಜಪೇಟೆ:
ಶಿಕ್ಷಣ ಇಲಾಖೆಯ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಾಜೇಶ್ ಮಾರ್ಗದರ್ಶನದಲ್ಲಿ ದೇವಣಗೇರಿ ಶಾಲೆಯಲ್ಲಿ ಅಮ್ಮತ್ತಿ ಒಂಟಿ ಅಂಗಡಿ ಕ್ಲಸ್ಟರ್ ಮಟ್ಟದ ಅಡುಗೆ ಅಮ್ಮಂದಿರಿಗೆ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ತೀರ್ಪುಗಾರರಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಶಿಕ್ಷಣ ಸಂಯೋಜಕಿ ಮಾರ್ಗರೇಟ್ ಮತ್ತು ವಿಶಾಲಶ್ರೀ ಹಾಗೂ ವಿರಾಜಪೇಟೆ ಮತ್ತು ಕಲ್ತೋಡು ಕ್ಲಸ್ಟರ್ ಸಿಆರ್‌ಪಿ ವೆಂಕಟೇಶ್ ಆಗಮಿಸಿದ್ದರು.
ಇದೇ ಸಂದರ್ಭ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಭಾಗವಹಿಸಿದ ಎಲ್ಲಾ ಅಡುಗೆಯವರಿಗೂ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು.