ರಸ್ತೆ ಹೊಂಡ ಮುಚ್ಚಿಸಿದ ಗುತ್ತಿಗೆದಾರ

pathole
Published on

ಬೆಳ್ವೆ: ಬೈಂದೂರು- ವಿರಾಜಪೇಟೆ ರಾಜ್ಯ ಹೆದ್ದಾರಿಯ ಬೆಳ್ವೆ ಸಮೀಪದ ರಸ್ತೆಯಲ್ಲಿ ಭಾರಿ ಗಾತ್ರದ ಹೊಂಡಕ್ಕೆ ಹೊಂಡಕ್ಕೆ ಕಟ್ಟಡ ಗುತ್ತಿಗೆದಾರ ಬೆಳ್ವೆ ಶ್ಯಾಮ್ ಆಚಾರ್ಯ ಕಾಂಕ್ರೀಟ್ ಹಾಕಿ ದುರಸ್ತಿಗೊಳಿಸಿದರು.

ರಸ್ತೆ ಹೊಂಡದಲ್ಲಿ ಮಳೆ ನೀರು ತುಂಬಿ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದರು. ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಕೆಸರು ನೀರಿನಿಂದ ನಿತ್ಯ ಸಂಚಾರ ಅಸಾಧ್ಯವಾಗಿತ್ತು. ಪ್ರತಿ ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ಕಟ್ಟಡ ಗುತ್ತಿಗೆದಾರ ಬೆಳ್ವೆ ಶ್ಯಾಮ್ ಆಚಾರ್ಯ ಅಲ್ಲಿಯ ಸಮೀಪದಲ್ಲಿ ಸೋಮವಾರ ಕಟ್ಟಡ ಕಾಮಗಾರಿ ನಡೆಸುತ್ತಿದ್ದರು. ಕಟ್ಟಡದ ಮಾಲೀಕರಿಗೆ ರಸ್ತೆ ಹೊಂಡದ ಸಮಸ್ಯೆ ಬಗ್ಗೆ ತಿಳಿಸಿ ಅವರಿಂದ ಸಿಮೆಂಟ್, ಜಲ್ಲಿ, ಮರಳು ಪಡೆದು, ಕಾರ್ಮಿಕರೊಂದಿಗೆ ರಸ್ತೆ ಹೊಂಡಕ್ಕೆ ಕಾಂಕ್ರಿಟ್ ಹಾಕಿ ಹೊಂಡ ಮುಚ್ಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net