ಸಿಎಂ ಆಗಲು ಸೂಕ್ತ ವ್ಯಕ್ತಿ ಇವರೇ... ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ಮತ್ತೊಬ್ಬರ ಹೆಸರು ಪ್ರಸ್ತಾಪಿಸಿದ ಮೊಯ್ಲಿ!

sr patil congress
Published on

ಬಾಗಲಕೋಟೆ: ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ರೇಸ್​ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ನಡುವೆ ತೀವ್ರ ಪೈಪೋಟಿ ಇರುವುದು ಎಲ್ಲರಿಗೂ ಗೊತ್ತೇ ಇದೆ. ಇವರಿಬ್ಬರ ಕುರಿತು ಪರ-ವಿರೋಧ ಚರ್ಚೆಗಳು ಸ್ವಪಕ್ಷದಲ್ಲೇ ನಡೆಯುತ್ತಿದೆ. ಇದೀಗ ಇವರಿಬ್ಬರ ಹೊರತಾಗಿ ಮತ್ತೊಂದು ಹೆಸರು ಕೇಳಿಬಂದಿದೆ. ಈ ವ್ಯಕ್ತಿಯೇ ಸಿಎಂ ಆಗಲು ಸೂಕ್ತ, ಯೋಗ್ಯ ಎಂದು ಕಾಂಗ್ರೆಸ್​ನ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೇಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿ ಸಿಎಂ ಆಗಲು ಕಾಂಗ್ರೆಸ್​ನಲ್ಲಿರುವ ಅತ್ಯಂತ ಯೋಗ್ಯ ವ್ಯಕ್ತಿ ಅಂದರೆ ಎಸ್​.ಆರ್. ಪಾಟೀಲ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇವರ ಹೆಸರನ್ನು ನಾನು ಶಿಫಾರಸು ಮಾಡಿದ್ದೆ. ಮುಖ್ಯಮಂತ್ರಿ ಆಗಲು ಅತ್ಯಂತ ಆದರ್ಶ, ಯೋಗ್ಯ ವ್ಯಕ್ತಿ ಅಂದ್ರೆ ಇವರೇ. ಪ್ರಾಮಾಣಿಕತೆ, ಸಜ್ಜನಿಕೆ ವ್ಯಕ್ತಿತ್ವವುಳ್ಳ ಸಾಕಾರರೂಪ ಎಸ್​.ಆರ್. ಪಾಟೀಲ ಎಂದು ಮೊಯ್ಲಿ ಹೇಳಿದರು.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಎಸ್​.ಆರ್. ಪಾಟೀಲ ಅವರ ಹುಟ್ಟುಹಬ್ಬದ ಹಿನ್ನೆಲೆ ಬೆಂಬಲಿಗರು ಮತ್ತು ಅಭಿಮಾನಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೊಯ್ಲಿ, ಕಾಂಗ್ರೆಸ್​ನಲ್ಲಿ ಸಿಎಂ ಆಗಲು ಸೂಕ್ತ ವ್ಯಕ್ತಿ ಅಂದ್ರೆ ಎಸ್​.ಆರ್. ಪಾಟೀಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net