ಕಾಂಗ್ರೆಸ್ ಧರಣಿ: ವಿಧಾನ ಪರಿಷತ್​ ಕಲಾಪ ಸೋಮವಾರಕ್ಕೆ ಮುಂದೂಡಿಕೆ

Vidhana
Published on

ಬೆಂಗಳೂರು: ವಿಧಾನ ಪರಿಷತ್​ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಸಚಿವ ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಗುರುವಾರ ಅಹೋರಾತ್ರಿ ಧರಣಿ ನಡೆಸಿದ ಕಾಂಗ್ರೆಸ್​ ಶಾಸಕರು, ಶುಕ್ರವಾರ ಬೆಳಗ್ಗೆಯೂ ಪ್ರತಿಭಟನೆ ಮುಂದುವರಿಸಿದರು. ಸದನದ ಮುಂಭಾಗವೇ ಕಾಂಗ್ರೆಸ್​ ಧರಣಿ, ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ವಾಕ್ಸಮರ ತೀವ್ರಗೊಂಡ ಹಿನ್ನೆಲೆ ಸಭಾಪತಿ ಹೊರಟ್ಟಿ ಅವರು ಪರಿಷತ್​ ಕಲಾಪವನ್ನು ಮುಂದೂಡಿದರು.

ಶುಕ್ರವಾರ ಬೆಳಗ್ಗೆ ಆರಂಭದಲ್ಲಿ 10 ನಿಮಿಷ ಕಾಲ ಕಲಾಪವನ್ನು ಮುಂದೂಡಲಾಗಿತ್ತಾದರೂ ಗದ್ದಲ ನಿಲ್ಲಲಿಲ್ಲ. ಈ ನಡುವೆ ಪ್ರಶ್ನೋತ್ತರ ಕಲಾಪ ಆರಂಭವಾದರೂ ಪ್ರತಿಭಟನೆ ಮುಂದುವರಿಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಸೋಮವಾರಕ್ಕೆ ಕಲಾಪ ಮುಂದೂಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net