ಕಾಂಗ್ರೆಸ್‌ ಅಹೋರಾತ್ರಿ ಧರಣಿ: ವಿಧಾನಸೌಧ ಆವರಣದಲ್ಲೇ ವಾಕಿಂಗ್‌, ದಿನ ಪತ್ರಿಕೆ ಓದು

dks congress protest
Published on

ಬೆಂಗಳೂರು: ರಾಷ್ಟ್ರಧ್ವಜ ಕುರಿತು ಹೇಳಿಕೆ ನೀಡಿದ್ದ ಸಚಿವ ಕೆ.ಎಸ್​.ಈಶ್ವರಪ್ಪ ಅವರನ್ನ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಕಾಂಗ್ರೆಸ್​ ಶಾಸಕರು ವಿಧಾನಸೌಧದಲ್ಲಿ ಗುರುವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಗುರುವಾರ ರಾತ್ರಿ ವಿಧಾನಸಭೆಗೆ ಹಾಸಿಗೆಗಳನ್ನು ತರಿಸಿಕೊಂಡ ಕಾಂಗ್ರೆಸ್​ ನಾಯಕರು ಅಲ್ಲೇ ಮಲಗಿ ಅಹೋರಾತ್ರಿ ಧರಣಿ ನಡೆಸಿದರು. ಶುಕ್ರವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕರು ವಿಧಾನಸೌಧದ ಆವರಣದಲ್ಲಿ ವಾಕಿಂಗ್ ಮಾಡಿದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕುಳಿತು ದಿನಪತ್ರಿಕೆಗಳನ್ನು ದಿನಪತ್ರಿಕೆಗಳನ್ನು ಓದಿದರು.

ಈಶ್ವರಪ್ಪರ ರಾಜೀನಾಮೆಯನ್ನ ನಾವು ಕೇಳ್ತಿಲ್ಲ. ರಾಷ್ಟ್ರದ್ರೋಹದ ಹೇಳಿಕೆ ನೀಡಿದ ಈಶ್ವರಪ್ಪರನ್ನು ಸಿಎಂ ಬೊಮ್ಮಾಯಿ ಅಥವಾ ಸ್ಪೀಕರ್ ಅವರೇ ವಜಾ ಮಾಡಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲಲ್ಲ ಎಂದು ಕಾಂಗ್ರೆಸ್​ ಎಚ್ಚರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net