ಬಳ್ಳಾರಿ ಪಾಲಿಕೆ ಗಾದಿ ಕಾಂಗ್ರೆಸ್​ ವಶ, ಬಿಜೆಪಿಗೆ ಮುಖಭಂಗ

New Project(3)
Published on

ಬಳ್ಳಾರಿ: ಇಲ್ಲಿಯ ಮಹಾನಗರ ಪಾಲಿಕೆಯ ಮೇಯರ್​ ಹಾಗೂ ಉಪಮೇಯರ್​ ಚುನಾವಣೆಯಲ್ಲಿ ಕೊನೆಗೂ ಕಾಂಗ್ರೆಸ್​ ಗೆದ್ದು ಬೀಗಿದೆ. ಬಹುಮತವಿಲ್ಲದಿದ್ದರೂ ಸ್ಪರ್ಧೆ ಮಾಡಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

ಮೇಯರ್​ ಆಗಿ ಮೊದಪಲ್ಲಿ ರಾಜೇಶ್ವರಿ, ಉಪಮೇಯರ್​ ಆಗಿ ಮಾಲನ್​ ಬಿ ಆಯ್ಕೆಯಾಗಿದ್ದಾರೆ. ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಆಪ್ತರೊಬ್ಬರು ಆಪರೇಷನ್​ ಕಮಲದಲ್ಲಿ ಭಾಗಿಯಾಗಿದ್ದು, ಸದಸ್ಯರಿಗೆ ಹಣದ ಆಫರ್​ ನೀಡಿದ್ದರು ಎಂಬ ಮಾಹಿತಿ ಬಹಿರಂಗ ಆಗುತ್ತಿದ್ದಂತೆ ತಮ್ಮ ಸದಸ್ಯರನ್ನು ಹಿಡಿದುಕೊಳ್ಳಲು ಕಾಂಗ್ರೆಸ್​ ಹರಸಾಹಸ ಪಟ್ಟಿತ್ತು.

ಕಾಂಗ್ರೆಸ್​ ನಾಯಕರು ಸದಸ್ಯರನ್ನು ಬೆಂಗಳೂರಿನ ಐಷಾರಾಮಿ ರೆಸಾರ್ಟ್​ನಲ್ಲಿ ಇರಿಸಿ ಹದ್ದಿನ ಕಣ್ಣಿಟ್ಟಿದ್ದರು. ಶನಿವಾರ ನಡೆದ ಚುನಾವಣೆಯಲ್ಲಿ ಅಂತಿಮ ಹಂತದವರೆಗೆ ಬಿಜೆಪಿ ನಡೆಸಿದ ತಂತ್ರ ಫಲಿಸಲಿಲ್ಲ. ಕೊನೆಗೆ ನಿರೀಕ್ಷೆಯಂತೆ ಪಾಲಿಕೆ ಗಾದಿ ಕಾಂಗ್ರೆಸ್ ಪಾಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net