ಕಾಂಗ್ರೆಸ್​-ಬಿಜೆಪಿ ಬಗ್ಗೆ ಜೆಡಿಎಸ್​ಗೆ ಮೃದುಧೋರಣೆ ಇಲ್ಲ: ಎಚ್​ಡಿಕೆ

HDK 2
Published on

ಹುಬ್ಬಳ್ಳಿ: ಜೆಡಿಎಸ್​ಗೆ ಬಿಜೆಪಿ ಬಗ್ಗೆ ಆಗಲಿ ಅಥವಾ ಕಾಂಗ್ರೆಸ್​ ಬಗ್ಗೆ ಆಗಲಿ ಮೃಧುಧೋರಣೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಚ್​ಡಿಕೆ, ಜೆಡಿಎಸ್​ ಅನ್ನು ಬಿಜೆಪಿಯ ಬಿ ಟೀಂ ಎನ್ನುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಸಿದ್ದರಾಮಯ್ಯ ಅವರಿಗೆ ಜೆಡಿಎಸ್​ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯಗಳು ಇಲ್ಲ ಎಂದರು.

ಜೆಡಿಎಸ್​ ಒಂದು ವೇಳೆ ಬಿಜೆಪಿಯ ಬಿ ಟೀಂ ಆಗಿದ್ದರೆ ಆ ಪಕ್ಷದ ಜತೆಗೆ 5 ವರ್ಷ ಸರ್ಕಾರ ಮುಂದುವರಿಸಬಹುದಿತ್ತು. ಆದರೆ, ಆ ಪಕ್ಷದೊಂದಿಗೆ ಹೊಂದಾಣಿಕೆ ಮೊಟಕುಗೊಳಿಸಿ ಕಾಂಗ್ರೆಸ್​ ಜತೆಗೆ ಸರ್ಕಾರ ರಚಿಸಿದ್ದೇವು ಎಂದು ಹೇಳಿದರು.

ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಗೆಲ್ಲಲಿದ್ದಾರೆ. ಸಿಂದಗಿಯಲ್ಲಿ ಕಳೆದ 5 ದಿನಗಳಿಂದ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದು, ಜೆಡಿಎಸ್​ ಪರ ಜನರ ಸ್ಪಂದನೆ ಇದೆ. ಜೆಡಿಎಸ್​ ಸರ್ಕಾರದ ಅವಧಿಯಲ್ಲಿ ನೀಡಿದ್ದ ನೀರಾವರಿ ಯೋಜನೆ, ಸಾಲಮನ್ನಾ ಸೇರಿ ಹಲವಾರು ಯೋಜನೆಗಳನ್ನು ಅಲ್ಲಿನ ಜನ ಇಂದಿಗೂ ಸ್ಮರಿಸುತ್ತಾರೆ ಎಂದು ಹೇಳಿದರು.

ಹಾನಗಲ್ಲ ಜನರ ಭಾವನೆ ಅರಿತು, ಅಲ್ಲಿನ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚಿಸುತ್ತೇನೆ. ಹಾನಗಲ್ಲನಲ್ಲಿ ಜೆಡಿಎಸ್​ ಶಕ್ತಿ ಕುಂದಿತ್ತು. ಜನತಾ ಪರಿವಾರದ ನಾಯಕರಾಗಿದ್ದ ಸಿ.ಎಂ. ಉದಾಸಿ ಅವರು ಬಿಜೆಪಿಗೆ ಹೋದ ನಂತರ ಆ ಭಾಗದಲ್ಲಿ ನಾಯಕತ್ವ ಕೊರತೆ ಎದುರಾಗಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net