ಪ್ರೇಮ ವಿವಾಹಕ್ಕೆ ಸಾಕ್ಷಿಯಾದ ಸಾಂತ್ವನ ಕೇಂದ್ರ

2 ilk prema vivaha
ಇಳಕಲ್ಲದ ಸಾಂತ್ವನ ಕೇಂದ್ರದಲ್ಲಿ ಪ್ರೇಮ ವಿವಾಹ ನೆರವೇರಿಸಲಾಯಿತು. ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ವೀಣಾ ಕಾಶಪ್ಪನವರ, ವಿ.ಎ. ಗಿರಿತಮ್ಮಣ್ಣನವರ, ರಘು ಹುಬ್ಬಳ್ಳಿ. ಸಂಸ್ಥೆ ಅಧ್ಯಕ್ಷ ಚಂದ್ರು ಅಪ್ಪಾಜಿ. ಸಂಸ್ಥೆ ಸಹ ಕಾರ್ಯದರ್ಶಿ ಹುಸೇನಸಾಬ ಮುದಗಲ್ಲ ಇತರರಿದ್ದರು.
Published on

ಇಳಕಲ್ಲ: ಅಂತರಜಾತೀಯ ಯುವಕ-ಯುವತಿಯ ಪ್ರೇಮ ವಿವಾಹಕ್ಕೆ ಸೋಮವಾರ ಇಲ್ಲಿನ ಸಾಂತ್ವನ ಕೇಂದ್ರ ಸಾಕ್ಷಿಯಾಯಿತು.

ಮುಷ್ಟಿಗೇರಿ ಗ್ರಾಮದ ಹೊನ್ನಪ್ಪ ವಡ್ಡರ ಎಂಬುವವರ ಪುತ್ರಿ ಮಹಾಲಕ್ಷ್ಮೀ ಅದೇ ಗ್ರಾಮದ ದ್ಯಾಮಣ್ಣ ನಾಯ್ಕರ ಎಂಬುವರ ಪುತ್ರ ಭೀಮಣ್ಣನನ್ನು ಪ್ರೀತಿಸುತ್ತಿದ್ದರು. ಆದರೆ, ಹುಡುಗಿ ಅಪ್ರಾಪ್ತಳಾಗಿದ್ದರಿಂದಾಗಿ ಬಾಗಲಕೋಟೆ ನ್ಯಾಯಾಲಯದಲ್ಲಿ ಪ್ರಕರಣ ನಡೆದು ಮಹಾಲಕ್ಷ್ಮೀಯನ್ನು ಇಳಕಲ್ಲ ಸಾಂತ್ವನ ಕೇಂದ್ರಕ್ಕೆ ಸೇರಿಸಲಾಗಿತ್ತು.

ಆಶಾದೀಪ ಅಂಗವಿಕಲರ ಸಂಸ್ಥೆಯ ಸಾಂತ್ವನ ಕೇಂದ್ರದಲ್ಲಿದ್ದ ಮಹಾಲಕ್ಷ್ಮೀ ಮದುವೆಗೆ ಅರ್ಹಳಾಗಿದ್ದರಿಂದ ಅದೇ ಯುವಕನೊಂದಿಗೆ ಸಂಸ್ಥೆ ಸದಸ್ಯರು, ಪದಾಧಿಕಾರಿಗಳು ಹಿರಿಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ವಿವಾಹ ನೆರವೇರಿಸಿದರು.

ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ಬಾಗಲಕೋಟೆ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಹುನಗುಂದ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿ.ಎ. ಗಿರಿತಮ್ಮಣ್ಣನವರ, ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ರಘು ಹುಬ್ಬಳ್ಳಿ, ಸಂಸ್ಥೆ ಅಧ್ಯಕ್ಷ ಚಂದ್ರು ಅಪ್ಪಾಜಿ, ಸಂಸ್ಥೆ ಸಹ ಕಾರ್ಯದರ್ಶಿ ಹುಸೇನಸಾಬ ಮುದಗಲ್ಲ, ಮುಷ್ಟಿಗೇರಿ ಗ್ರಾಮದ ಹಿರಿಯರಾದ ಮಾರುತಿ ತಿಮ್ಮಣ್ಣ ಬಾದಾಮಿ, ಚನ್ನಬಸಪ್ಪ ಮುತ್ತೂರು, ಮಹಿಳಾ ಸಾಂತ್ವನ ಕೇಂದ್ರದ ಕೌಟುಂಬಿಕ ಸಲಹೆಗಾರ್ತಿ ಭಾಗ್ಯಶ್ರೀ ಜುಲಗುಡ್ಡ, ಸಮಾಜ ಸೇವಕ ಅಮೃತ ಹುಬ್ಬಳ್ಳಿ, ಮಂಜುಳಾ ಮೆದಿಕೇರಿ ಹಾಗೂ ಸಂಸ್ಥೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net