

ಮಡಿಕೇರಿ:
ದೇಶಕಂಡ ಮಹಾನ್ ಪತ್ರಕರ್ತರಾದ ರಾಷ್ಟçಪಿತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕುಶಾಲನಗರ ತಾಲೂಕು ಘಟಕದ ವತಿಯಿಂದ ಕುಶಾಲನಗರದ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಂದು ಬ್ಲಾಕ್‌ಮೇಲ್ ಪತ್ರಕರ್ತರಿಂದ ನೈಜ ಪತ್ರಕರ್ತ ಕಳೆದು ಹೋಗುವ ಸ್ಥಿತಿ ಉಂಟಾಗಿದೆ. ಬ್ಲಾಕ್ ಮೇಲ್ ಪತ್ರಕರ್ತರ ಸಂಖ್ಯೆ ಹೆಚ್ವಾಗಿದ್ದು, ಇಂತಹವರಿAದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇಂಥ ವ್ಯಕ್ತಿಗಳನ್ನು ಪತ್ರಿಕೋದ್ಯಮದಿಂದ ದೂರ ಇಡುವ ಕೆಲಸ ನಾವುಗಳೇ ಮಾಡಬೇಕು. ಪತ್ರಕರ್ತರು ಸಮಾಜದ, ಶೋಷಿತರ, ಸಮಸ್ಯೆಗಳ ಧ್ವನಿಯಾಗಿ ಕೆಲಸ ಮಾಡಬೇಕು ಎಂದರು.
ಬೆಳ್ಳಿ ಮಹೋತ್ಸವ ಅಂಗವಾಗಿ ಹೊರತರಲು ಉದ್ದೇಶಿರುವ ಬೆಳ್ಳಿ ಪಯಣ ಸ್ಮರಣ ಸಂಚಿಕೆಯ ಮುಖಪುಟ ಬಿಡುಗಡೆ ಮಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕುಶಾಲನಗರದಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಶಾಸಕರ ಅನುದಾನದ ಜೊತೆಗೆ ದಾನಿಗಳಿಂದಲೂ ಸಹಕಾರ ಕೊಡಿಸಲು ಪ್ರಯತ್ನಿಸಲಾಗುವುದು. ಈಗ ಇರುವ ಪತ್ರಕರ್ತರ ಕಟ್ಟಡ ಜಾಗವನ್ನು ಪತ್ರಕರ್ತರ ಸಂಘದ ಹೆಸರಿಗೆ ಮಾಡಿಕೊಡಲು ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಸಂಘದ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಿದ ನಂತರ ಮಾತನಾಡಿದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್, ಪತ್ರಕರ್ತರು ಸಮಾಜದಲ್ಲಿನ ಅಂಕುಡೊAಕುಗಳನ್ನು ತಿದ್ದುವ ಹಾಗೂ ಸಮಸ್ಯೆಗಳನ್ನು ಬಿಂಬಿಸುವ ಲೇಖನಗಳತ್ತ ಗಮನ ಹರಿಸಬೇಕು ಎಂದರು.
ಹಿರಿಯ ಪತ್ರಕರ್ತ ಜಿ. ರಾಜೇಂದ್ರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿ, ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮರಂಗಕ್ಕೆ ತುಂಬಾ ಮಹತ್ವ ಇದೆ. ಸಮಾಜದ ಏಳಿಗೆಯಲ್ಲಿ ಪತ್ರಿಕಾ ಕ್ಷೇತ್ರದ ಕೊಡುಗೆ ಮುಖ್ಯವಾದುದು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೋಬಳಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಘದ ಏಳಿಗೆಗಾಗಿ ಶ್ರಮಿಸಿದ ಸ್ಥಾಪಕ ಅಧ್ಯಕ್ಷ ಬಿ.ಆರ್.ನಾರಾಯಣ, ಕೆ.ಕೆ.ನಾಗರಾಜ ಶೆಟ್ಟಿ, ಎಂ.ಎನ್.ಚAದ್ರಮೋಹನ್, ಸಬಲಂ ಬೋಜಣ್ಣ ರೆಡ್ಡಿ, ರಘುಹೆಬ್ಬಾಲೆ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಡಾ.ಕಿಶೋರ್ ಕುಮಾರ್, ಪುರಸಭೆಯ ಮೇಸ್ತ್ರಿ ಮೋಹನ್‌ಕುಮಾರ್, ಸಮಾಜ ಸೇವಕ ಮುನೀರ್, ಸಮಾಜ ಸೇವಕಿ ಪದ್ಮಪುರುಷೋತ್ತಮ, ಪತ್ರಿಕಾ ವಿತರಕ ವಿ.ಪಿ. ಪ್ರಕಾಶ್, ನಿವೃತ್ತ ಮುಖ್ಯ ಶಿಕ್ಷಕ ನಜೀರ್ ಅಹ್ಮದ್, ಕರ್ನಾಟಕ ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಣಡ ಪಿ. ಅಪ್ಪಣ, ಬಸಪ್ಪ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಸದಸ್ಯರ ಮಕ್ಕಳಾದ ಶಿವಾನಿ ಕೆ.ಜಿ., ವರ್ಷಿಣಿ ಆರ್.,
ಮಹಮ್ಮದ್ ಅರ್ಹಾನ್, ಮಹಮ್ಮದ್ ಝೈನ್, ಅನನ್ಯ ಕೆ.ಎಸ್., ದೀಕ್ಷಾ ಕೆ.ಎಸ್., ತಿಷ್ಯಾ ಪೊನ್ನೇಟಿ, ಚಿತ್ತಾರ ಎಸ್.ಪಿ., ಇಂಚರ ಎಸ್.ಪಿ., ಧಣಿ ಕೆ.ಎನ್., ಕೆ.ಜೆ. ನಿಶಾನ್, ಕೆ.ಜೆ. ಕಿಶಾನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ವನಿತಾಚಂದ್ರಮೋಹನ್, ಕಾರ್ಯದರ್ಶಿ ಕೆ.ಕೆ. ನಾಗರಾಜ ಶೆಟ್ಟಿ., ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಟಿ.ಆರ್.ಪ್ರಭುದೇವ್, ಕೊಡಗು ವಿವಿ ಪ್ರಾಧ್ಯಾಪಕ ಜಮೀರ್ ಅಹಮ್ಮದ್, ಕೊಡವ ಸಮಾಜದ ನಿರ್ದೇಶಕಿ ಧರಣಿಸೋಮಯ್ಯ ಮತ್ತಿತರರು ಇದ್ದರು.