ಲಿಂಗರಾಜ್​ ಕಾಲೇಜ್​ಗೆ ಸಮಗ್ರ ವೀರಾಗ್ರಣಿ

25dvk 2
Published on

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಅಂಜುಮನ್​ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಿಂದ ಈಚೆಗೆ ಏರ್ಪಡಿಸಿದ್ದ ರಾಣಿ ಚನ್ನಮ್ಮ ವಿವಿ ವ್ಯಾಪ್ತಿಯ ಏಕವಲಯ ವೇಟ್​ ಲಿಪ್ಟಿಂಗ್​ ಪಂದ್ಯಾವಳಿಯಲ್ಲಿ ಕೆಎಲ್​ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯ ಒಟ್ಟು 38 ಅಂಕಗಳೊಂದಿಗೆ ಪಂದ್ಯಾವಳಿಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.

ಪುರುಷರ ವಿಭಾಗದಲ್ಲಿ ನಾಲ್ಕು ಚಿನ್ನ, 1ಬೆಳ್ಳಿ ಹಾಗೂ ಕಂಚಿನ ಪದಕ ಪಡೆದು, 19 ಅಂಕದೊಂದಿಗೆ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಎರಡು ಚಿನ್ನ ಹಾಗೂ ಮೂರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಬಿ.ಕಾಂ 5ನೇ ಸೆಮಿಸ್ಟರ್​ನ ಕಾವ್ಯಾ ಮೊಕಾಶಿ, ಬಿ.ಎ 5ನೇ ಸೆಮಿಸ್ಟರ್​ನ ಚನ್ನವಿರೇಶ ಹಿಕ್ಕಿಮಠ, ಬಿ.ಎ 3 ಸೆಮಿಸ್ಟರ್​ನ ಸಿ. ಶಿವಮಣಿ ಯುನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಲಕ್ಷಿ$್ಮ ಕಾಂಬಳೆ 48 ಕೆಜಿಯಲ್ಲಿ ಬೆಳ್ಳಿ ಪದಕ, ಅನಿತಾ ದಡ್ಡಿ 53 ಕೆಜಿಯಲ್ಲಿ ಬೆಳ್ಳಿ, ಕಾವ್ಯಾ ಮೊಕಾಶಿ 58 ಕೆಜಿಯಲ್ಲಿ ಚಿನ್ನ, ಸ್ಪುರಾ ನಾಯಿಕ್​ 77 ಕೆಜಿಯಲ್ಲಿ ಬೆಳ್ಳಿ ಹಾಗೂ ಶೈಲಾ ಅರ್ಜುನಗಿ 86 ಕೆಜಿ ವಿಭಾಗದಲ್ಲಿ ಚಿನ್ನದ ಪದಕ. ಹಾಗೂ ಪುರುಷರ ವಿಭಾಗದಲ್ಲಿ: ಪ್ರವಿಣ ಕುದ್ರಿಮೋತಿ 60ಕೆಜಿಯಲ್ಲಿ ಬೆಳ್ಳಿ, ಸಂಜಯ ಪಾಟೀಲ 65ಕೆಜಿಯಲ್ಲಿ ಕಂಚು, ಸಿ.ಶಿವಮಣಿ 71 ಕೆಜಿಯಲ್ಲಿ ಚಿನ್ನ, ಸೌರಭ ಪಾಟೀಲ 88ಕೆಜಿಯಲ್ಲಿ ಚಿನ್ನ ಹಾಗೂ 110ಕೆಜಿ ವಿಭಾಗದಲ್ಲಿ ಪ್ರಜ್ವಲ್​ ಹಲ್ಲೋಳ್ಳಿ ಮತ್ತು ಚನ್ನವಿರೇಶ ಹಿಕ್ಕಿಮಠ ಚಿನ್ನದ ಪದಕ ಪಡೆದುಕೊಂಡರು. ವಿದ್ಯಾರ್ಥಿಗಳ ಸಾಧನೆಯನ್ನು ಪ್ರಾಚಾರ್ಯ ಡಾ.ಹನಮಂತ ಮೇಲಿನಮನಿ, ದೈಹಿಕ ಶಿಣ ನಿರ್ದೇಶಕ ಡಾ.ಚಿ.ರಾಮಾರಾವ್​ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net