

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆಯಿಂದ ಇಲ್ಲಿಯ ಭೈರಿದೇವರಕೊಪ್ಪದ ಸನಾ ಶಾಹೀನ್ ಪದವಿಪೂರ್ವ ಕಾಲೇಜ್‌ನಲ್ಲಿ ಶುಕ್ರವಾರ ಉಪನ್ಯಾಸಕರಿಗೆ ಒಂದು ದಿನದ ಅರ್ಥಶಾಸ್ತ್ರ ಪುನಶ್ಚೇತನ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಡಿಡಿಪಿಯು ಕೆ.ಪಿ. ಸುರೇಶ ಉದ್ಘಾಟಿಸಿ ಮಾತನಾಡಿ, ಅರ್ಥಶಾಸ್ತ್ರ ಒಂದು ವಿಷಯವನ್ನಾಗಿ ಪಾಠ ಮಾಡದೇ, ದೇಶ-ವಿದೇಶಗಳ ಅರ್ಥವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕು. ಜಾಗತಿಕ ಆರ್ಥಿಕ ಏರಿಳಿತ ವಿದ್ಯಾರ್ಥಿಗಳಿಗೆ ಮನವರಿಕೆಯಾದರೆ, ನಮ್ಮ ದೇಶದ ಅರ್ಥ ವ್ಯವಸ್ಥೆ ಏಳಿಗೆಗೆ ಬೇಕಾದ ಪೂರಕ ಅಂಶ ಅಧ್ಯಯನ ಮಾಡಲು ಅನುಕೂಲವಾಗಲಿದೆ ಎಂದರು.
ಕಾಲೇಜ್ ಕಾರ್ಯಕಾರಿ ಮಂಡಳಿ ಧರ್ಮಾಧ್ಯಕ್ಷ ಕೆ.ಎಂ. ಮಳಗಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಮಹಮ್ಮದ್ ಆಯೂಬ್ ಸವಣೂರ, ಪ್ರಾಚಾರ್ಯ ಡಾ. ಆರಿಫಾ ಮಕಾಂದಾರ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಹನುಮಂತಪ್ಪ ಡಿ., ಉಪನ್ಯಾಸಕರ ಸಂಘದ ಅಧ್ಯಕ್ಷ ಜಿ.ಬಿ. ತಹಸೀಲ್ದಾರ್, ಸಂಪನ್ಮೂಲ ವ್ಯಕ್ತಿ ವಿ.ಎಸ್. ದಲಾಲಿ, ಅರ್ಥ ಶಾಸ್ತ್ರ ವೇದಿಕೆ ಅಧ್ಯಕ್ಷ ಡಾ. ವಂದ್ರಶೇಖರ ವೈ. ಇತರರು ಇದ್ದರು.