ಸ್ಪರ್ಧಾತ್ಮಕ ಮನೋಭಾವ ಅತ್ಯವಶ್ಯ

A competitive spirit is essential
ವಿಜಯಪುರದ ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಇಂಜಿನಿಯರ್ಸ್​ ಡೇ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಸ್​ಪಿ ಋಷಿಕೇಶ ಸೋನಾವಣೆ, ಡಾ. ಗೀತಾಂಜಲಿ ಪಾಟೀಲ, ಡಾ. ಪ್ರದಿಪ ಮಾಳಜಿ ಮತ್ತಿತರರಿದ್ದಾರೆ.
Published on

ವಿಜಯಪುರ: ಭಾರತ ರತ್ನ ಸರ್​. ಎಂ.ವಿಶ್ವೇಶ್ವರಯ್ಯನವರ ಬದುಕು ಮತ್ತು ಸಾಧನೆ ಸ್ಫೂರ್ತಿದಾಯಕ. ಅವರ ದೂರದೃಷ್ಟಿಯ ನೀರಾವರಿ ಸೌಲಭ್ಯಗಳಿಂದ ನಾಡಿನ ರೈತರ ಬದುಕು ಹಸನಾಗಿಸುವ ಜತೆಗೆ ಕೈಗಾರಿಕೆಗಳು ಸಹ ಉದಯಿಸಿವೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಬಿಇ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಇಂಜಿನಿಯರ್ಸ್​ ಡೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಹೊಸ ತಂತ್ರಾನಗಳು ಅಭಿಯಾಂತ್ರಿಕರಿಂದ ಆವಿಷ್ಕಾರಗೊಂಡು ಹೊರಬಂದಿವೆ.

ಜಗತ್ತು ಸದಾ ಬದಲಾವಣೆ ಬಯಸುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೂಡಾ ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸಿ ನಿಮ್ಮ ಗುರಿ, ಕಠಿಣ ಪರಿಶ್ರಮ, ವಿಶ್ವಾಸಾರ್ಹತೆ ಗಳಿಸಿಕೊಂಡು ಉತ್ತಮ ಇಂಜಿನಿಯರ್​ಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಹಳೇಯ ವಿದ್ಯಾರ್ಥಿ ಕರ್ನಲ್​ ರಮೇಶ ತಿಮ್ಮಪೂರ, ಬಸವರಾಜ ಹರಗಬಾಳ, ಡಾ. ಶೈಲಾ ಬಂಟನೂರ, ವಿಶಾಲ ಧರೇಪ್ಪಗೋಳ, ಸತೀಶ ಇನಾಮದಾರ ತಮ್ಮ ಅನುಭವ ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾಯೆರ್ ಡಾ. ಗೀತಾಂಜಲಿ ಪಾಟೀಲ, ಡಾ. ಪ್ರದಿಪ ಮಾಳಜಿ ಮಾತನಾಡಿದರು. ಸಂಯೋಜಕಿ ಡಾ. ಅನುರಾಧಾ ಟಂಕಸಾಲಿ ಸ್ವಾಗತಿಸಿದರು. ಅಮೃತಾ ಹಿರೇಮಠ ಪ್ರಾರ್ಥಿಸಿದರು. ಡಾ. ಆಶಾ ಪಾಟೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net