ಮೀನು ಹಿಡಿಯಲು ಗುಂಪುಗಳ ನಡುವೆ ಗಲಾಟೆ

Crime Logo
Published on

ಗೋಕರ್ಣ: ಇಲ್ಲಿನ ತೊರ್ಕೆ ಗ್ರಾಪಂನ ಹೊಸ್ಕಟ್ಟ ಗಜನಿ ಭೂಮಿಯಲ್ಲಿ ಬಲೆ ಹಾಕಿ ಮೀನು ಹಿಡಿಯುವ ಸಂಬಂಧ ಎರಡು ಗುಂಪುಗಳ ನಡುವೆ ವಿವಾದ ಉಂಟಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾದ ಘಟನೆ ಬುಧವಾರ ನಡೆದಿದೆ.


ಹೊಸ್ಕಟ್ಟದ ಪ್ರವೀರ ತಿಮ್ಮಪ್ಪ ಹರಿಕಂತ್ರ ಮತ್ತು ಪ್ರಮೋದ ದಯಾನಂದ ಹೊಸ್ಕಟ್ಟ ಅವರು ತೊರ್ಕೆ ಗ್ರಾಪಂದಿಂದ ಹೊಸ್ಕಟ್ಟ ಗಜನಿ ಭೂಮಿ ಬಂಡಿನ ಗೇಟ್ ನಿರ್ವಹಣೆ ಮತ್ತು ಬಲೆ ಹಾಕಿ ಮೀನು ಹಿಡಿಯುವ ಟೆಂಡರ್ ಪಡೆದುಕೊಂಡಿದ್ದರು. ಅದರಂತೆ ಬುಧವಾರ ಸಂಜೆ ಇದನ್ನು ನಿರ್ವಹಿಸಲು ಬಂದಾಗ ಹೊಸ್ಕಟ್ಟದ ಪರಮೇಶ್ವರ ಮಂಕಾಳಿ ಹರಿಕಂತ್ರ ಮತ್ತು ಇತರ ನಾಲ್ವರು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿ ದೂರು ದಾಖಲಾಗಿದೆ.

ಇದಕ್ಕೆ ಪ್ರತಿಯಾಗಿ ಪರಮೇಶ್ವರ ಮಂಕಾಳಿ ಹರಿಕಂತ್ರ ತಮ್ಮ ಕುಟುಂಬದವರು 81-82ನೇ ಸಾಲಿನಿಂದ ತೊರ್ಕೆ ಗ್ರಾಮದ ಸಿದ್ಧೇಶ್ವರ ಜಂತ್ರಡಿ ಸ.ನಂ. 93, 94, 95ರಲ್ಲಿ ಮೀನುಗಾರಿಕೆ ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ಬುಧವಾರ ಸಂಜೆ ಸ್ಥಳಕ್ಕೆ ಮೀನುಗಾರಿಕೆಗೆ ಹೋದಾಗ ಹೊಸ್ಕಟ್ಟದ ಪ್ರವೀರ ತಿಮ್ಮಪ್ಪ ಹರಿಕಂತ್ರ,ಪ್ರಮೋದ ದಯಾನಂದ ಹರಿಕಂತ್ರ ಮತ್ತು ಇತರ 13 ಜನ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿ ಪ್ರತಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net