ಸರ್ವ ಸ್ಪರ್ಶಿ ಆಡಳಿತದ ಸಂಕಲ್ಪ; ಸಿಎಂ

HYR cm 07
Published on

ಹಿರಿಯೂರು: ಜಾತ್ಯತೀತ ತತ್ವ-ಸಾಮಾಜಿಕ ನ್ಯಾಯದ ತಳಹದಿ ಮೇಲೆ ಸರ್ವ ಸ್ಪರ್ಶಿ ಆಡಳಿತದ ಸಂಕಲ್ಪ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದ ತಾಲೂಕು ಕಚೇರಿ ಸಮೀಪ ಕುರುಬ ಸಮುದಾಯ ಭವನ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನತೆ ಖುಷಿಯಾಗಿದ್ದು, ಶಕ್ತಿ ಯೋಜನೆ, ಪ್ರತಿ ತಿಂಗಳು ಮನೆ ಯಜಮಾನಿಗೆ ನೀಡುವ ಎರಡು ಸಾವಿರ ಹಣ ಮಹಿಳೆಯರ ಆರ್ಥಿಕ ಪ್ರಗತಿ-ಕುಟುಂಬ ನಿರ್ವಹಣೆಗೆ ಅನುಕೂಲವಾಗಲಿದೆ ಎಂದರು.

ರಾಜ್ಯದ ಎಲ್ಲ ಧರ್ಮ, ಜಾತಿ ಜನರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಕರುನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸಲು ಶಕ್ತಿ ಮೀರಿ ಶ್ರಮಿಸಲಾಗುವುದು. ದೇಶದಲ್ಲೇ ಮಾದರಿ ಜನಪರ ಯೋಜನೆ ಜಾರಿಗೆ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಬಿ.ಜಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಟಿ.ರಘುಮೂರ್ತಿ, ವೀರೇಂದ್ರ ಪಪ್ಪಿ, ಡಿಸಿ ದಿವ್ಯಾಪ್ರಭು, ರಾಜ್ಯ ಕುರುಬ ಸಂಘದ ಅಧ್ಯಕ್ಷ ಸುಬ್ಬಣ್ಣ, ಪ್ರಧಾನ ಕಾರ್ಯದರ್ಶಿ ವೆಂಕಟೇಶಮೂರ್ತಿ, ಉಪಾಧ್ಯಕ್ಷ ಜಗದೀಶ್, ತಾಲೂಕಾಧ್ಯಕ್ಷ ಮಹಾಂತೇಶ್, ಗೋಡೆ ತಿಪ್ಪೇಸ್ವಾಮಿ, ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ, ಗಿರಿಜಪ್ಪ, ವಿಶ್ವನಾಥ್, ವೆಂಕಟೇಶ್, ಕಾಂತರಾಜ್‌ಹುಲಿ, ಮಂಜಣ್ಣ, ಮಹಾಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net