ಸರ್ಕಾರಿ ಬಸ್-ಮಹೀಂದ್ರಾ ಪಿಕಪ್ ವಾಹನ ನಡುವೆ ಮುಖಾಮುಖಿ ಡಿಕ್ಕಿ

5blrp2
Published on

ಬೇಲೂರು: ತಾಲೂಕಿನ ಚೀಕನಹಳ್ಳಿ ಸಮೀಪದ ಬೂತಪ್ಪನಗುಡಿ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಮಹೀಂದ್ರಾ ಪಿಕಪ್ ವಾಹನದ ನಡುವೆ ಶನಿವಾರ ತಡರಾತ್ರಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಒಬ್ಬನಿಗೆ ಗಂಭೀರ ಹಾಗೂ ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮೂಡಿಗೆರೆ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದ ದರ್ಶನ್ (21) ಹಾಗೂ ಆತನ ಸ್ನೇಹಿತರಾದ ಮದನ್ (20) ಮತ್ತು ಚಂದ್ರು (25) ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ತಾಲೂಕಿನ ಬಿಕ್ಕೋಡು ಹೋಬಳಿಯ ಹಿರಿವಾಟೆ ಗ್ರಾಮದಲ್ಲಿರುವ ತಮ್ಮ ತೋಟದಲ್ಲಿ ಕೆಲಸ ಮುಗಿಸಿಕೊಂಡು ಮೂವರು ಪಿಕಪ್ ವಾಹನದಲ್ಲಿ ತಡರಾತ್ರಿ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಚೀಕನಹಳ್ಳಿಯ ಭೂತಪ್ಪನ ಗುಡಿ ತಿರುವಿನಲ್ಲಿ 12 ಗಂಟೆ ಸಮಯದಲ್ಲಿ ಮೂಡಿಗೆರೆಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ.

ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಪಿಕಪ್ ವಾಹನದ ಚಾಲಕ ದರ್ಶನ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ದರೆ, ಮದನ್‌ಗೆ ಹಾಸನದಲ್ಲಿ ಹಾಗೂ ಚಂದ್ರುಗೆ ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಬಸ್‌ನಲ್ಲಿದ್ದ 8 ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಘಟನೆಯಲ್ಲಿ ಎರಡೂ ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದೆ. ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net