

ಸುಂಟಿಕೊಪ್ಪ : ಮನೆ ಮುಂದೆ ವಾಯು ವಿವಾರ ಮಾಡುತ್ತಿದ್ದ ಕಾಫಿ ಬೆಳೆಗಾರನ ಮೇಲೆ ಒಂಟಿ ಸಲಗ ದಾಳಿಗೆ ಯತ್ನಿಸಿದ್ದು, ಸಮಯಪ್ರಜ್ಞೆಯಿಂದ ಓಡಿ ಕಾಡಾನೆಯ ಹಿಡಿತದಿಂದ ಪಾರಗಿದ್ದಾರೆ.
ಕೊಡಗರಹಳ್ಳಿಯ ಲಕ್ಷ್ಮೀ ತೋಟದ ಮಾಲೀಕ ಬಿ.ಡಿ. ಸುಭಾಷ್ ಶುಕ್ರವಾರ ಬೆಳಗ್ಗೆ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ. ಒಂಟಿ ಸಲಗದ ಗೀಳು ಜನರ ಕೂಗಾಟ, ನಾಯಿಗಳ ಚಿರಾಟದಿಂದ ಕೆಲವು ನಿಮಿಷಗಳ ಕಾಲ ಯಾರಿಗೂ ಏನು ತೋಚದೆ ಅಯೋಮಯ ಪರಿಸ್ಥಿತಿ ಉಂಟಾಗಿತ್ತು. ಈ ನಡುವೆ ಒಂಟಿ ಸಲಗ ರಸ್ತೆ ದಾಟಿ ತೋಟದೊಳಗೆ ಮರೆಯಾಗಿದೆ.
ಕೆಲವು ಸಮಯದ ಹಿಂದೆ ಸಿದ್ದಾಪುರ ವ್ಯಾಪ್ತಿಯಲ್ಲಿ ವರದಿಯಾಗುತ್ತಿದ್ದ ಕಾಡಾನೆಗಳ ದಾಳಿ ಮತ್ತು ಹಾವಳಿಗಳು ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಉಪ್ಪು ತೋಡು, ಕಂಬಿಬಾಣೆ, 7ನೇ ಹೊಸಕೋಟೆ, ಮತ್ತಿಕಾಡು, ಭೂತನಕಾಡು, ಕೆದಕಲ್, ಹೊರೂರು ವ್ಯಾಪ್ತಿಯಲ್ಲಿ ಹಗಲು ರಾತ್ರಿ ಎನ್ನದೆ ಕಾಡಾನೆಗಳು ಸಂಚರಿಸುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.