ವಿದ್ಯುತ್ ತಂತಿ ಮೇಲೆ ಬಿದ್ದ ತೆಂಗಿನ ಮರ

Published on

ಬೇಲೂರು: ಪಟ್ಟಣದ ಪಂಪ್‌ಹೌಸ್ ರಸ್ತೆಯಲ್ಲಿ ಸೋಮವಾರ ಗಾಳಿ, ಮಳೆಗೆ ತೆಂಗಿನ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಪಟ್ಟಣದ ಪಂಪ್‌ಹೌಸ್ ಬೀದಿಯ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಸೇರಿದ ವಾಣಿಜ್ಯ ಮಳಿಗೆಗಳ ಮುಂದೆ ತೆಂಗಿನ ಮರವಿತ್ತು. ಅದರ ಬುಡ ಅರ್ಧಕ್ಕರ್ಧ ಕೊಳೆತಿದ್ದರಿಂದ ಯಾವಾಗ ಬೇಕಾದರೂ ಬೀಳುವ ಸಾಧ್ಯತೆ ಇತ್ತು. ಇದನ್ನು ಮನಗಂಡ ಸಹಕಾರ ಸಂಘದ ಅಧ್ಯಕ್ಷ ಸೋಮೇಶ್, ಮರ ತೆರವಿಗಾಗಿ ವಿದ್ಯುತ್ ಸಂಪರ್ಕ ಕಡಿತಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸೆಸ್ಕ್ ಎಇಇ ಬಸವರಾಜು ಮತ್ತು ಸಿಬ್ಬಂದಿ ಸೋಮವಾರ ಬೆಳಗ್ಗೆ ವಿದ್ಯುತ್ ಸಂಪರ್ಕ ಕಡಿತಕ್ಕೆ ತಂತಿ ಬೇರ್ಪಡಿಸುತ್ತಿದ್ದರು.

ಈ ಸಂದರ್ಭ ಜೋರು ಗಾಳಿ, ಮಳೆಗೆ ತೆಂಗಿನ ಮರ ಬುಡ ಸಮೇತ ನೆಲಕ್ಕುರುಳಿತು. ಅದೃಷ್ಟವಶಾತ್ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net