VIDEO| ಹುಬ್ಬಳ್ಳಿಯಲ್ಲಿ ನಾಗರಹಾವನ್ನೇ ನುಂಗಿದ ಮತ್ತೊಂದು ನಾಗರಹಾವು! ಸ್ಥಳಕ್ಕೆ ಬಂದ ಸಂಗಮೇಶ ಮಾಡಿದ್ದೇನು?

snake sangamesh
Published on

ಹುಬ್ಬಳ್ಳಿ: ಗಾಮನಗಟ್ಟಿ ಗ್ರಾಮದ ಈಶ್ವರಿಯ ವಿಶ್ವವಿದ್ಯಾಲಯದ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಭಾನುವಾರ ನಾಗರ ಹಾವನ್ನೇ ನುಂಗಿ ಸಂಕಷ್ಟದಲ್ಲಿದ್ದ ಮತ್ತೊಂದು ನಾಗರಹಾವನ್ನು ಸ್ನೇಕ್ ಸಂಗಮೇಶ ರಕ್ಷಿಸಿದರು.

ನಾಗರ ಹಾವೊಂದು ಮತ್ತೊಂದು ನಾಗರಹಾವನ್ನು ನುಂಗಿ ಒದ್ದಾಡುತ್ತಿತ್ತು. ಇದನ್ನು ಕಂಡ ಸ್ಥಳೀಯ ಕಟ್ಟಡ ಕಾರ್ಮಿಕರು ಸ್ನೇಕ್ ಸಂಗಮೇಶಗೆ ಕರೆ ಮಾಡಿದ್ದರು. ಕೂಡಲೇ ಧಾವಿಸಿದ ಸಂಗಮೇಶ, ಹಾವನ್ನು ಸೆರೆ ಹಿಡಿದು ನುಂಗಿದ್ದ ಹಾವನ್ನು ಹೊರಗೆ ತೆಗೆದರು. ನಂತರ ಹಾವನ್ನು ಸುರಕ್ಷಿತವಾಗಿ ಕಲಘಟಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದರು.

ಬೇಸಿಗೆಯಲ್ಲಿ ಹೆಚ್ಚು: ಜನವರಿಯಿಂದ ಮೇ, ಜೂನ್‌ವರೆಗೂ ಹಾವುಗಳು ಹೆಚ್ಚಾಗಿ ಹೊರಗೆ ಕಂಡು ಬರುತ್ತವೆ. ಈ ಅವಧಿಯಲ್ಲಿ ಸಂಭೋಗ ಕ್ರಿಯೆಯಲ್ಲಿ ತೊಡಗುತ್ತವೆ. ನಂತರ ಮೊಟ್ಟೆ ಇಟ್ಟು, ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸುತ್ತವೆ. ಹಾವುಗಳು ಕಂಡರೆ ದಯವಿಟ್ಟು ಯಾರೂ ಕೊಲ್ಲದಿರಿ. ನನ್ನ ಮೊ.ಸಂ. 72592 62295 ಕ್ಕೆ ಕರೆ ಮಾಡಿ ಎನ್ನುತ್ತಾರೆ ಸ್ನೇಕ್ ಸಂಗಮೇಶ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net