

ಶಿರಸಿ: ಮನೆಯೊಳಗಿನ ಮೊಳೆಗೆ ನೇತು ಹಾಕಿದ್ದ ಪ್ಯಾಂಟ್ನಲ್ಲಿ ನಾಗರ ಹಾವು ಸೇರಿಕೊಂಡು ಪ್ಯಾಂಟ್ ಮಾಲೀಕನನ್ನು ದಂಗುಗೊಳಿಸಿದ ಘಟನೆ ನಗರದ ನಾರಾಯಣಗುರು ನಗರದಲ್ಲಿ ಶನಿವಾರ ನಡೆದಿದೆ.
ಇಲ್ಲಿಯ ಮಹಾಂತೇಶ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ ಹೊರಗಡೆ ಹೋಗಲು ಪ್ಯಾಂಟ್ ಹಾಕಿಕೊಳ್ಳಬೇಕೆಂದು ನೇತುಹಾಕಿದ್ದ ಮೊಳೆಯಿಂದ ಪ್ಯಾಂಟ್ ತೆಗೆದಾಗಿ ಹಾವು ಹೊರ ಬಂದು ಬುಸ್ ಎಂದಿದೆ. ಇದರಿಂದ ಕಂಗಾಲಾದ ಮಹಾಂತೇಶ ಪ್ಯಾಂಟನ್ನು ದೂರಕ್ಕೆ ಎಸೆದು ಬಚಾವಾಗಿದ್ದಾರೆ. ಬಳಿಕ ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರನ್ನು ಕರೆಸಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟುಬಂದಿದ್ದಾರೆ.