

ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ನ ತನಿಖೆಯನ್ನು NIA(ರಾಷ್ಟ್ರೀಯ ತನಿಖಾ ದಳ)ಗೆ ವಹಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರವೀಣ್ ಹತ್ಯೆ ಕೇಸ್ ಅನ್ನು ಎನ್ಐಎಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ. ಕೇರಳ ಬಾರ್ಡರ್ನಲ್ಲಿ ಕಟ್ಟೆಚರ ವಹಿಸಲಾಗುತ್ತಿದ್ದು, ಸಿಸಿ ಟಿವಿ ಅಳವಡಿಸಲಾಗುವುದು. ಸುರತ್ಕಲ್ನಲ್ಲಿ ನಡೆದ ಮತ್ತೊಬ್ಬ ಯುವಕನ ಹತ್ಯೆ ಬಗ್ಗೆಯೂ ತೀವ್ರ ತೆನಿಖೆ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಸ್ವಲ್ಪ ದಿನಗಳ ನಂತರ ಧಾರ್ಮಿಕ ಮುಖಂಡರ ಸಭೆ ಮಾಡ್ತೀನಿ. ಪ್ರವೀಣ್ ಹತ್ಯೆಯಲ್ಲಿ ಹೊರ ರಾಜ್ಯದವರ ಕೈವಾಡ ಇದೆ. ಪ್ರಕರಣ ಕುರಿತು ತೀವ್ರಗತಿಯಲ್ಲಿ ತನಿಖೆ ನಡೆಯುತ್ತಿದೆ ಎಂದರು.