ಜನ್ಮ ದಿನದಂದು ಗಿಡನೆಟ್ಟು ಪಾಲಿಸಿದರೆ ಸ್ವಚ್ಛಪರಿಸರ ನಿರ್ಮಾಣ ಸಾಧ್ಯ

17 ckm 6
ಚಿಕ್ಕಮಗಳೂರು ಕಲ್ಯಾಣ ನಗರ ಪಾರ್ಕ್ನಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಅವರು ತಮ್ಮ ಸಹೋದರನ ಪುತ್ರಿಯ ಜನ್ಮ ದಿನದಂದು ಗಿಡ ನೆಡುವ ಮೂಲಕ ಜನ್ಮದಿನಕ್ಕೊಂದು ಮರ ಅಭಿಯಾನಕ್ಕೆ ಚಾಲನೆ ನೀಡಿದರು. ಕಲ್ಯಾಣ್ ಕುಮಾರ್, ಲತಾ, ಮೌಲ್ಯ, ಎಚ್.ಪಿ.ಕಲಾ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಸಮಾಜದ ಪ್ರತಿಯೊಬ್ಬ ನಾಗರಿಕರು ತಮ್ಮ ಮಕ್ಕಳ ಜನ್ಮ ದಿನದ ಆಚರಣೆಯ ಜೊತೆಗೆ ಅಂದು ಒಂದೊAದು ಗಿಡನೆಟ್ಟು ತಮ್ಮ ಮಕ್ಕಳಂತೆ ಕಾಪಾಡಿದರೆ ಜನ್ಮ ದಿನದ ಆಚರಣೆ ಸಾರ್ಥಕವಾಗುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ಕಲ್ಯಾಣನಗರದ ಉದ್ಯಾನವನದಲ್ಲಿ ಪತ್ರಕರ್ತ ಕಲ್ಯಾಣ್ ಕುಮಾರ್ ಅವರ ಪುತ್ರಿ ಮೌಲ್ಯಳ ೧೦ನೇ ವರ್ಷದ ಜನ್ಮ ದಿನದ ಅಂಗವಾಗಿ ಗಿಡನೆಟ್ಟು ಬಳಿಕ ಮಾತನಾಡಿದ ಅವರು, ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಜನಿಸಿರುವುದು ನಮ್ಮ ಪುಣ್ಯ. ಸುಂದರವಾದ ಮಲೆನಾಡಿನಲ್ಲಿ ಇತ್ತೀಚೆಗೆ ಮರಗಿಡಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕಾರಿ ಸಂಗತಿ ಎಂದರು.
ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪಾಲಕರೂ ತಮ್ಮ ಮಕ್ಕಳ ಜನ್ಮದಿನಾಚರಣೆ ಸಂದರ್ಭದಲ್ಲಿ ಗಿಡನೆಟ್ಟು ಪೋಷಿಸಿದರೆ ಪ್ರಕೃತಿ ಸುಂದರವಾಗುವುದರ ಜೊತೆಗೆ ಆಮ್ಲಜನಕ ಹೆಚ್ಚು ಉತ್ಪತ್ತಿಯಾಗಿ, ಎಲ್ಲರ ಆರೋಗ್ಯಕ್ಕೆ ಪೂರಕವಾಗಲಿದೆ ಎಂದು ಹೇಳಿದರು.
ಜನ್ಮ ದಿನಕ್ಕೊಂದು ಮರ ಎಂಬ ಅಭಿಯಾನದ ಮೂಲಕ ಪರಿಸರ ಸಂರಕ್ಷಣೆ ಮಾಡಲು ತಾವು ವಿನೂತನ ಕಾರ್ಯವನ್ನು ಆರಂಭಿಸಿದ್ದು, ಪೂರ್ವಜರು ನೀಡಿರುವ ಈ ಸ್ವಚ್ಛ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಕಲ್ಯಾಣ್ ಕುಮಾರ್, ಪ್ರಮುಖರಾದ ಲತಾ ಕಲ್ಯಾಣ್ ಕುಮಾರ್, ಮೌಲ್ಯ, ಎಚ್.ಪಿ ಕಲಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net