ಶಾಸ್ತ್ರೀಯ ಸಂಗೀತೋತ್ಸವ ನಾಡಿದ್ದು

Music
Published on

ಲಕ್ಷ್ಮೇಶ್ವರ: ಪಟ್ಟಣದ ಗುರುಗಂಧರ್ವ ಸಂಗೀತ ಸಭಾದಿಂದ ನ.30ರಂದು ಮಧ್ಯಾಹ್ನ 3.30ಕ್ಕೆ ಎಪಿಎಂಸಿ ವರ್ತಕರ ಸಭಾ ಭವನದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ.

ಕುಂದಗೋಳದ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ಅಧ್ಯಕ್ಷ ಅರವಿಂದ ಕಟಗಿ ಉದ್ಘಾಟಿಸುವರು. ಈರಮ್ಮ ಭಜಂತ್ರಿ ಅಧ್ಯಕ್ಷತೆ ವಹಿಸುವರು. ಸಾಹಿತಿಗಳಾದ ಕೆ.ಎಸ್. ಕೊಡ್ಲಿವಾಡ, ನಾಗರಾಜ ಹಣಗಿ ಮುಖ್ಯಅತಿಥಿಗಳಾಗಿ ಆಗಮಿಸುವರು. ಸಂಗೀತ ಕಲಾವಿದರಾದ ಸಿರಸಿಯ ರೇಖಾ ದಿನೇಶ, ಲಕ್ಷ್ಮೇಶ್ವರದ ಪರಶುರಾಮ ಭಜಂತ್ರಿ, ಡಾ. ಅರ್ಜುನ ವಠಾರ, ಕೃಷ್ಣಕುಮಾರ ಕುಲಕರ್ಣಿ, ಸಾರಂಗ ಕುಲಕರ್ಣಿ, ಶ್ರೀಹರಿ ದಿಗ್ಗಾವಿ, ಅನಂತ ಪಾವಣಸ್ಕರ, ಶಿವಸ್ವಾಮಿ ಹಿರೇಮಠ, ಅಕ್ಷಯಕುಮಾರ ಭಜಂತ್ರಿ ಮತ್ತು ಗುರುಗಂಧರ್ವ ಸಂಗೀತ ಶಾಲೆ ವಿದ್ಯಾರ್ಥಿಗಳು ಸಂಗೀತ ಸೇವೆ ಸಲ್ಲಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net