

ಚೇತನ್, ಮಂಚೇನಹಳ್ಳಿ
ಚಿಕ್ಕಬಳ್ಳಾಪುರ ತಾಲೂಕಿನ ಪೋಶೆಟ್ಟಿಹಳ್ಳಿಯಿಂದ ಜಕ್ಕಲಮೊಡಗು ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಹಾದು ಹೋಗುವ ರಸ್ತೆ ಅನೇಕ ವರ್ಷಗಳಿಂದ ಹಾಳಾಗಿದ್ದರೂ ಮರು ಡಾಂಬರೀಕರಣ ಮಾಡದ ಕಾರಣ ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ.
ಗುಂಡಿಗಳ ಮೇಲೆ ರಸ್ತೆ ಇದೆಯೋ ಅಥವಾ ರಸ್ತೆಯಲ್ಲಿ ಗುಂಡಿಗಳಿವೆಯೋ ಎಂಬುದೇ ತಿಳಿಯದಂತಾಗಿದೆ. ದೊಡ್ಡಬಳ್ಳಾಪುರಕ್ಕೆ ಹಾದು ಹೋಗುವ ರಸ್ತೆ ಇದಾಗಿದ್ದು, ಪೋಶೆಟ್ಟಿಹಳ್ಳಿಯಿಂದ ಜಕ್ಕಲಮೊಡಗು ಗ್ರಾಮದವರೆಗೂ ಗುಂಡಿಗಳದ್ದೇ ಹಾವಳಿಯಾಗಿದೆ. ಸಣ್ಣಸಣ್ಣ ಜಲ್ಲಿ ರಸ್ತೆ ಮೇಲೆ ಬಂದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಡಾಂಬರೀಕರಣ ಕಂಡು ದಶಕಗಳೇ ಉರುಳಿದ್ದರೂ ಮರು ಡಾಂಬರೀಕರಣಕ್ಕೆ ಸಂಬಂಧ ಇಲಾಖೆ ಹಾಗೂ ಜನಪ್ರತಿನಿಧಿಗಳು ಆಸಕ್ತಿ ವಹಿಸುತ್ತಿಲ್ಲ.
ವಿದ್ಯಾರ್ಥಿಗಳಿಗೆ ತೊಂದರೆ
ಪೋಶೆಟ್ಟಿಹಳ್ಳಿ ಶಾಲೆ ಮತ್ತು ಚಿಕ್ಕಬಳ್ಳಾಪುರಕ್ಕೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ನಿತ್ಯ ಇದೇ ರಸ್ತೆ ಮಾರ್ಗವಾಗಿ ಬಸ್ ಅಥವಾ ಆಟೋಗಳಲ್ಲಿ ಸಂಚರಿಸಬೇಕಿದೆ. ಬಸ್ ಅಥವಾ ಆಟೋಗಳು ಸರಿಯಾದ ಸಮಯಕ್ಕೆ ಬಂದರೂ ಸಹ ರಸ್ತೆಯಲ್ಲಾ ಗುಂಡಿಮಯವಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಇದರಿಂದಾಗಿ ಶಾಲಾ, -ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ವಾಹನ ಚಾಲಕರಿಗೆ ಸಂಕಷ್ಟ
ಶಾಲಾ&-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಪಟ್ಟಣಗಳಿಗೆ ವಿವಿಧ ಕೆಲಸ ಕಾರ್ಯಗಳ ನಿಮಿತ್ರ ಹೋಗುವ ಸಾರ್ವಜನಿಕರಿಗೆ ಸಮರ್ಪಕ ಬಸ್ ಸೌಲಭ್ಯವಿಲ್ಲ. ಆಟೋಗಳನ್ನು ಅವಲಭಿಸುವ ಅನಿವಾರ್ಯತೆ ಎದುರಾಗಿದೆ. ರಸ್ತೆ ಹೊಂಡ ಗುಂಡಿ ಇರುವುದರಿಂದ ಅವರು ಬರಲು ಹಿಂದೇಟು ಹಾಕುತ್ತಿದ್ದಾರೆ. ಆಟೋದವರ ಸಂಪಾದನೆಯ ಅರ್ಧಭಾಗ ರಿಪೇರಿಗೆ ಇಡಬೇಕಾದ ದುರುವಸ್ಥೆ ಇವರದಾಗಿದೆ. ಇನ್ನು ದ್ವಿಚಕ್ರ ಸವಾರರ ಪಾಡಂತೂ ತೀರಾ ಅದ್ವಾನವಾಗಿದೆ. ಇತ್ತೀಚೆಗೆ ಬಿದ್ದ ಅಲ್ಪಸ್ವಲ್ಪ ಮಳೆಯಿಂದ ಗುಂಡಿಗಳೆಲ್ಲ ನೀರಿನಿಂದ ಆವರಿಸಿದೆ, ರಾತ್ರಿವೇಳೆ ಸಂಚರಿಸುವಾಗ ರಸ್ತೆ ಯಾವುದು, ಗುಂಡಿ ಯಾವುದು ತಿಳಿಯುವುದಿಲ್ಲ. ಹಲವು ಮಂದಿ ಬಿದ್ದು, ಆಸ್ಪತ್ರೆ ಸೇರಿರುವ ಟನೆಗಳೂ ಇವೆ.
ಅಧಿಕಾರಿ, ಜನಪ್ರತಿನಿಧಿಗಳ ರ್ನಿಲಕ್ಷ
ಪೋಶೆಟ್ಟಿಹಳ್ಳಿಯಿಂದ ಜಕ್ಕಲಮಡುಗು ಹಾಗೂ ದೊಡ್ಡಬಳ್ಳಾಪುರಕ್ಕೆ ನಿತ್ಯ ಸಂಚರಿಸುವವರ ಸಂಖ್ಯೆ ಬಹಳಷ್ಟಿದೆ. ಈ ರಸ್ತೆ ಗುಂಡಿಮಯವಾಗಿ ಜನಸಾಮ್ಯಾರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದರೂ, ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಇದು ಅವರ ರ್ನಿಲಕ್ಷ$್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇನ್ನಾದರೂ ಸಂಬಂಧ ಪಟ್ಟ ಆಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರಸ್ತೆ ಮರುಡಾಂಬರೀಕರಣ ಮಾಡಲು ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಿದೆ.
ರಸ್ತೆ ಮರುಡಾಂಬರೀಕರಣ ಮಾಡದ ಕಾರಣ ಪ್ರತಿನಿತ್ಯ ವಾಹನ ಸವಾರರು ಪರದಾಡುವಂತಾಗಿದೆ. ಈ ಭಾಗಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲ. ಶಾಲಾ &ಕಾಲೇಜು ಮಕ್ಕಳು ಹಾಗೂ ಪಟ್ಟಣಗಳಿಗೆ ಹೋಗುವವರು ಆಟೋಗಳನ್ನೇ ಅವಲಂಭಿಸಿದ್ದಾರೆ. ರಸ್ತೆ ಸರಿಯಿಲ್ಲದ ಕಾರಣ ಆಟೋ ಪದೇ ಪದೆ ರಿಪೇರಿಗೆ ಬರುತ್ತಲೇ ಇರುತ್ತವೆ. ದುಡಿದ ಅರ್ಧ ಭಾಗ ರಿಪೇರಿಗೆ ಇಡಬೇಕಾದ ಪರಿಸ್ಥಿತಿ ಇದೆ. ಸಂಬಂಧಪಟ್ಟವರು ಶೀಘ್ರವಾಗಿ ಮರುಡಾಂಬರೀಕರಣ ಮಾಡಲು ಮುಂದಾಗಬೇಕು.
ನವೀನ್ ಕುಮಾರ್, ಆಟೋ ಚಾಲಕ, ಪೋಶೆಟ್ಟಿಹಳ್ಳಿ
ಜಕ್ಕಲಮೊಡಗುನಿಂದ ಪೋಶೆಟ್ಟಿಹಳ್ಳಿಗೆ ಹೋಗಲು ಸುಮಾರು 10 ನಿಮಿಷ ಅಗುತ್ತದೆ. ಅದರೆ ಈಗ ರಸ್ತೆ ಸರಿ ಇಲ್ಲದ ಕಾರಣ 20 ರಿಂದ 25 ನಿಮಿಷ ಬೇಕು. ಇದರಿಂದಾಗಿ ಕಾಲೇಜಿಗೂ ಸಹ ತಡವಾಗುತ್ತದೆ. ಅದೇ ರೀತಿ ಬಸ್ನ ಚಾಲಕರಿಗೂ ಸಹ ಈ ರಸ್ತೆಯಲ್ಲಿ ಸಾಗಲು ತುಂಬಾ ಕಷ್ಟಕರವಾಗಿದೆ.
ನಂದೀಶ್ , ಕಾಲೇಜು ವಿದ್ಯಾರ್ಥಿ ,ಜಕ್ಕಲಮೊಡಗು,