

ಶಿವಮೊಗ್ಗ: ಹೊಂಗಿರಣ ಸಂಸ್ಥೆಯಿAದ ಆ.25ರಂದು ಸಂಜೆ 6.30ಕ್ಕೆ ಕುವೆಂಪು ರಂಗಮAದಿರದಲ್ಲಿ ನೀನಲ್ಲದೆ ಮತ್ತಾರು ಇಲ್ಲವಯ್ಯ ಶೀರ್ಷಿಕೆಯಡಿ ಬಸವಣ್ಣನ 38 ವಚನಗಳ ನೃತ್ಯರೂಪಕವನ್ನು ಸಾಣೇಹಳ್ಳಿಯ ಶಿವಕುಮಾರ ಕಲಾಸಂಘದ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ.
12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ನಡೆಸಿದ ಶಿವಶರಣರ ವಚನಗಳನ್ನು ಸಂರಕ್ಷಿಸಿ ಅದನ್ನು ಜನರ ಬಳಿಗೆ ಕೊಂಡೊಯ್ಯುವ ಸಂಕಲ್ಪದೊAದಿಗೆ ಸಾಣೇಹಳ್ಳಿಯ ಶಿವಕುಮಾರ ಕಲಾಸಂಘ ರಾಷ್ಟಾçದ್ಯಂತ ಈ ನೃತ್ಯರೂಪಕ ಪ್ರದರ್ಶನ ಹಮ್ಮಿಕೊಂಡಿದೆ. ಇದರ ಭಾಗವಾಗಿ ನಗರದಲ್ಲೂ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಂಗಕರ್ಮಿ ಡಾ. ಸಾಸ್ವೆಹಳ್ಳಿ ಸತೀಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬಸವಾದಿ ಶಿವಶರಣರ ತತ್ವ, ಸಿದ್ಧಾಂತಗಳನ್ನು ಪ್ರಚಾರ, ಪ್ರಸಾರ ಮತ್ತು ಅನುಷ್ಠಾನಗೊಳಿಸಲು ಸಾಣೇಹಳ್ಳಿಯನ್ನು ಕೇಂದ್ರವಾಗಿರಿಸಿಕೊAಡು ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಅದರ ಪ್ರತಿ-Àಲವಾಗಿ ಈ ನೃತ್ಯರೂಪಕ ರಚನೆಯಾಗಿದೆ ಎಂದರು.
24 ಕಲಾವಿದೆಯರು ಈ ನೃತ್ಯರೂಪಕದಲ್ಲಿದ್ದಾರೆ. ತರಳಬಾಳು ಶಾಖಾಮಠ ಸಾಣೇಹಳ್ಳಿ ಪೀಠದ ಪಟ್ಟಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನವಿದೆ. ರಂಗ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಪರಿಕಲ್ಪನೆಯಲ್ಲಿ ಇದು ಮೂಡಿಬಂದಿದೆ. ಸಿ.ಅಶ್ವತ್ಥ್ ಸಂಗೀತವಿದೆ ಎಂದು ಮಾಹಿತಿ ನೀಡಿದರು.
ವೀರಶೈವ ಸಮಾಜದ ಪ್ರಮುಖರಾದ ಎಸ್‌ಎಸ್.ಜ್ಯೋತಿಪ್ರಕಾಶ್, ಇ.ವಿಶ್ವಾಸ್, ಡಾ. ಧನಂಜಯ ಸರ್ಜಿ, ಧ್ರುವ, ತೇಜಸ್ವಿ, ಮೋಹನ್, ಶ್ರೀಕಂಠಪ್ರಸಾದ್ ಸುದ್ದಿಗೋಷ್ಠಿಯಲ್ಲಿದ್ದರು.