ಶಿಕ್ಷಕರ ಯತ್ನದಿಂದ ಮಗುವಿನ ಕಲಿಕೆ ಉತ್ತಮ

New VSV New
Published on

ಹುಬ್ಬಳ್ಳಿ : ಶಿಕ್ಷಕರ ಪ್ರಯತ್ನ ಮತ್ತು ಪಾಲಕರಿಂದ ಅನುಕರಣೆ ಸೇರಿದರೆ ಮಗುವಿನ ಕಲಿಕೆ ಇನ್ನೂ ಉತ್ತಮ ಮಟ್ಟಕ್ಕೆ ತಲುಪಬಹುದು ಎಂದು ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.

ನಗರದ ಕಾರವಾರ ರಸ್ತೆಯ ಮಿಷನ್ ಕಂಪೌಂಡ್​ನಲ್ಲಿ ನೂತನವಾಗಿ ಆರಂಭಿಸಲಾದ ‘ಜೆನೆಸಿಸ್‘ ಇಂಟರ್​ನ್ಯಾಷನಲ್ ಪ್ರಿ ಸ್ಕೂಲ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಯ ಹೆಸರಿನ ಅರ್ಥ ಜೆನೆಸಿಸ್ ಎಂದರೆ ಶುಭಆರಂಭ. ಹಾಗೆಯೇ ಈ ಶಾಲೆಯಲ್ಲಿ ಕಲಿಯಲು ಪ್ರವೇಶ ಪಡೆದಿರುವ ಎಲ್ಲ ಮಕ್ಕಳ ಕಲಿಕೆ ಶುಭ ಆರಂಭವಾಗಲಿ. ಇಡೀ ಜೀವನದಲ್ಲಿ ಶುಭವಾಗಲಿ ಎಂದು ಹಾರೈಸಿದರು

ಶಾಲೆಯ ಅಧ್ಯಕ್ಷ ರೆವರೆಂಡ್ ಸ್ಯಾಮ್ಸನ್ ಬೆಂಗಳೂರ ಮಾತನಾಡಿ. ಶಾಲೆಯಲ್ಲಿ ಚಿಕ್ಕ ಮಕ್ಕಳಿಗೆ ಪಠ್ಯದ ಜತೆಗೆ ಮನೋ ಕೌಶಲ್ಯತೆಯನ್ನು ಬೆಳೆಸುವ ವಿವಿಧ ರೀತಿಯ ಚಟುವಟಿಕೆಗಳ ಮೂಲಕ

ಮಕ್ಕಳ ಕಲಿಕೆಯನ್ನು ಇನ್ನೂ ಆಸಕ್ತಿದಾಯಕವಾಗಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಶಾಲೆಯ ಶಿಕ್ಷಕಿ ಜೆಸ್ಸಿಕಾ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net