ಬಾಲ್ಯದ ನೆನಪು ಮೆಲುಕು ಹಾಕಿದ ಸಾಹಿತಿ ಕಂಬಾರ

web11
ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಲಾಯಿತು. ಸುರೇಶ ಉರಬಿನಹಟ್ಟಿ , ಎನ್.ಬಿ. ನಿರ್ವಾಣಿ, ಆನಂದ ಬಿಳಿಕಿಚಡಿ, ವೀರನಗೌಡ ಈಶ್ವರಪ್ಪಗೋಳ, ಕಿಶೋರ ಬೆಣ್ಣಿ, ಅಶೋಕ ಕರಲಿಂಗನ್ನವರ ಇತರರಿದ್ದರು.
Published on

ಅಂಕಲಗಿ: ಈ ಗ್ರಾಮದಲ್ಲಿ ಬಾಲ್ಯದಲ್ಲಿ ಆಡಿ ಬೆಳೆದ ಮತ್ತು ಓಡಾಡಿದ ನೆನಪುಗಳು ಇನ್ನೂ ಅಚ್ಚಳಿಯದೆ ಉಳಿದಿದೆ. ಅವುಗಳು ಮರೆಯಾಗಲಾರದ ದಿನಗಳು ಎಂದು ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಸಮೀಪದ ಅಕ್ಕತಂಗೇರಹಾಳ ದುರ್ಗಾ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ಆಶೀರ್ವಾದ ಪಡೆದು ಮಾತನಾಡಿದ ಅವರು, ಧರ್ಮಪತ್ನಿ ತವರಾದ ಅಕ್ಕತಂಗೇರಹಾಳ ನನ್ನ ಪ್ರೀತಿಯ ಗ್ರಾಮ. ಇಲ್ಲಿಯ ಜನರ ನನ್ನೊಂದಿಗಿನ ಪ್ರೀತಿ, ವಾತ್ಸಲ್ಯಗಳು, ಸೌಜನ್ಯ ನನ್ನನ್ನು ಕಟ್ಟಿ ಹಾಕಿವೆ. ನನಗೆ ದೊರೆತ ಎಲ್ಲ ಗೌರವಗಳಿಗಿಂತ ನನಗೆ ಇಲ್ಲಿನ ಗೌರವಗಳು, ಮಾನ, ಸನ್ಮಾನಗಳು ಅತ್ಯಂತ ಹಿರಿದಾಗಿವೆ. ಈ ನಾಡು ಸಹಿತ ನನಗೆ ಸಾಹಿತ್ಯದ ಒಂದು ಭಾಗವೆನಿಸಿದ್ದು, ನನಗೆ ಅತಿ ಹೆಮ್ಮೆಯಾಗಿದೆ. ಅಕ್ಕತಂಗೇರಹಾಳ ನನ್ನ ಪ್ರೀತಿಯ ಒಂದು ಭಾಗವೆಂಬುದನ್ನು ಅಭಿಮಾನದಿಂದ ಹೇಳುವೆ. ಸನ್ಮಾನಿಸಿದ ಅಭಿಮಾನಿಗಳು, ಮತ್ತು ಸಂಬಂಧಿಗಳಿಗೆ ಧನ್ಯವಾದ ತಿಳಿಸಿದರು.

ಗ್ರಾಮದ ಹಿರಿಯರು, ಅಭಿಮಾನಿಗಳು ಕಂಬಾರ ಅವರನ್ನು ಸನ್ಮಾನಿಸಿದರು. ಆನಂದ ಬಿಳಿಕಿಚಡಿ ಮತ್ತು ಪತ್ರಕರ್ತ ಸುರೇಶ ಉರಬಿನಹಟ್ಟಿ, ಬೆಳಗಾವಿ ಮಾಜಿ ಮಹಾಪೌರ ಎನ್.ಬಿ. ನಿರ್ವಾಣಿ, ದುರ್ಗಾ ದೇವಸ್ಥಾನ ಕಮಿಟಿ ಅಧ್ಯಕ್ಷ ವೀರನಗೌಡ ಈಶ್ವರಪ್ಪಗೋಳ, ಬಸವಣ್ಣಿ ಬೆಣ್ಣಿ, ಬಾಳಪ್ಪ ದಡ್ಡಿ, ಸಿದವೀರಪ್ಪ ತುಪ್ಪದ, ಕಿಶೋರ ಬೆಣ್ಣಿ, ಅಶೋಕ ಕರಲಿಂಗನ್ನವರ, ರಮೇಶ ನಿರ್ವಾಣಿ, ಗುರುವಯ್ಯ ಹಿರೇಮಠ, ಬಾಳಗೌಡ ಪಾಟೀಲ, ಶಂಕರ ತುಪ್ಪದ, ರವಿ ಹಣಮನ್ನವರ, ದಯಾನಂದ ಹ್ಯಾಗಿ, ಅಪ್ಪಾಸಾಹೇಬ ಬಡಿಗೇರ, ನಿವೃತ್ತ ಕ್ಯಾಪ್ಟನ್ ಶಿವನಗೌಡ ನಿರ್ವಾಣಿ ಅಭಿಮಾನಿಗಳು, ಭಕ್ತರು, ಕಮಿಟಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net