ಧರಿಯಪ್ಪ ಮೇಟಿಗೆ 10 ಲಕ್ಷ ರೂಗಳ ಚೆಕ್

blg 23-1 parihara
ಮೊಸಳೆ ದಾಳಿಗೆ ಕೈ ಕಳೆದುಕೊಂಡಿದ್ದ ಕಾತರಕಿ ಗ್ರಾಮ ಧರಿಯಪ್ಪ ಮೇಟಿ ಅವರಿಗೆ ಶಾಸಕ ಜೆ.ಟಿ. ಪಾಟೀಲ ಸರ್ಕಾರದ 10 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಿದರು. ತಹಸೀಲ್ದಾರ್ ವಿನೋದ ಹತ್ತಳ್ಳಿ, ಬೀಳಗಿ ವಲಯ ಅರಣ್ಯಾಧಿಕಾರಿ ಅಮೃತ ಗಂಡೋಸಿ, ತಾಪಂ ಇಒ ಅಭಯಕುಮಾರ ಮೊರಬ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ ಇತರರಿದ್ದರು.
Published on

ಬೀಳಗಿ: ಮೊಸಳೆ ದಾಳಿಗೆ ಕೈ ಕಳೆದುಕೊಂಡಿದ್ದ ಕಾತರಕಿ ಗ್ರಾಮದ ಧರಿಯಪ್ಪ ಮೇಟಿ (35) ಅವರಿಗೆ ಶಾಸಕ ಜೆ.ಟಿ. ಪಾಟೀಲ ಅರಣ್ಯ ಇಲಾಖೆ ವತಿಯಿಂದ 10 ಲಕ್ಷ ರೂಗಳ ಚೆಕ್‌ನ್ನು ಮಂಗಳವಾರ ನೀಡಿದರು.

ಪಟ್ಟಣದಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಗಾಯಾಳುವಿಗೆ ಚೆಕ್ ಹಸ್ತಾಂತರಿಸಲಾಯಿತು.

ಧರಿಯಪ್ಪ ಅವರು ತನ್ನ ಬೀಗರ ಊರಾದ ಹೊನ್ನಾಳ ಗ್ರಾಮ ಬಳಿಯ ನದಿಯಲ್ಲಿ ಎತ್ತುಗಳ ಮೈತೊಳೆಯುತ್ತಿದ್ದಾಗ ಅನಿರೀಕ್ಷಿತವಾಗಿ ಮೊಸಳೆ ದಾಳಿ ನಡೆಸಿತ್ತು. ಘಟನೆಯಲ್ಲಿ ತನ್ನ ಕೈ ಕಳೆದುಕೊಂಡಿದ್ದರು.

ಜಿಲ್ಲಾ ಅರಣ್ಯಾಧಿಕಾರಿ ರುದ್ರಣ್ಣ ಪಿ. ಮಾತನಾಡಿ, ದಾಳಿಗೊಳಗಾದ ಫಲಾನುಭವಿಯ ಆರೈಕೆಗಾಗಿ ಸರ್ಕಾರದಿಂದ ಪ್ರತಿ ತಿಂಗಳು 4 ಸಾವಿರ ರೂ ಮಾಶಾಸನ ನೀಡಲಾಗುವುದೆಂದು ತಿಳಿಸಿದರು.

ತಹಸೀಲ್ದಾರ್ ವಿನೋದ ಹತ್ತಳ್ಳಿ, ಬೀಳಗಿ ವಲಯ ಅರಣ್ಯಾಧಿಕಾರಿ ಅಮೃತ ಗಂಡೋಸಿ, ತಾಪಂ ಇಒ ಅಭಯಕುಮಾರ ಮೊರಬ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಡಾ. ಸಾಗರ ತೆಕ್ಕೆನ್ನವರ, ತಾಲೂಕು ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹನುಮಂತ ಕಾಖಂಡಕಿ, ಹನುಮಂತ ಸೂಳಿಕೇರಿ, ಅನೀಲ ಗಚ್ಚಿನಮನಿ, ಶಿವಾನಂದ ಮಾದರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net