ಪಠ್ಯದಲ್ಲಿ ಬದಲಾವಣೆ ಅಗತ್ಯ

A change in the text is necessary
ವಿಜಯಪುರದ ಎಸ್​.ಎಸ್​. ಹೈಸ್ಕೂಲ್​ ಆವರಣದಲ್ಲಿ ಬಿದರಿ ಚೈಲ್ಡ್​ ಅಕಾಡೆಮಿ ವತಿಯಿಂದ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಕ್ರೀಡಾ ಸ್ಪರ್ಧೆಯನ್ನು ಉದ್ಘಾಟಿಸಿ ಡಾ.ಎಲ್​.ಎಚ್​. ಬಿದರಿ ಮಾತನಾಡಿದರು.
Published on

ವಿಜಯಪುರ: ಅತಿಯಾದ ಅಭ್ಯಾಸ, ಶಾಲೆ, ಮೊಬೈಲ್​ ಬಳಕೆ ಇವೆಲ್ಲವೂ ಮಕ್ಕಳ ಮೇಲೆ ಸಾಕಷ್ಟು ಒತ್ತಡದ ಪ್ರಭಾವ ಬೀರುತ್ತಿವೆೆ ಎಂದು ಬಿದರಿ ಚೈಲ್ಡ್​ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಡಾ. ಎಲ್​.ಎಚ್​.ಬಿದರಿ ಬೇಸರ ವ್ಯಕ್ತಪಡಿಸಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಎಸ್​.ಎಸ್​. ಹೈಸ್ಕೂಲ್​ ಮೈದಾನದಲ್ಲಿ ಬಿದರಿ ಚೈಲ್ಡ್​ ಅಕಾಡೆಮಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಮಕ್ಕಳ ಪಠ್ಯಕ್ರಮದಲ್ಲಿ ಬದಲಾವಣೆಗಳಾಗಬೇಕಿದೆ ಎಂದರು.

ಮಕ್ಕಳಿಗೆ ಅಭ್ಯಾಸದ ಜತೆ&ಜತೆಗೆ ಆಟಕ್ಕೂ ಕೂಡ ಅಷ್ಟೇ ಪ್ರಾಮುಖ್ಯತೆ ನೀಡಬೇಕು. ಕ್ರೀಡೆ ನಮ್ಮ ಬದುಕಿನಲ್ಲಿ ನಮಗೆ ಹೋರಾಟದ ಬಗ್ಗೆ ಕಲಿಸಿ ಕೊಡುತ್ತದೆ. ಬದುಕಿನ ಕಷ್ಟದ ಸಮಯ ಬಂದಾಗ ಕುಗ್ಗದಿರುವಂತೆ ನಮ್ಮ ಮನೋಬಲ ಹೆಚ್ಚಿಸುತ್ತದೆ. ಅಂತಹ ಶಕ್ತಿ ಕ್ರೀಡೆಗೆ ಇದೆ. ಆದರೆ, ಸದ್ಯದ ದಿನಗಳಲ್ಲಿ ನಾವೆಲ್ಲರೂ ಅದನ್ನೆ ಕಡೆಗಣಿಸುತ್ತಿರುವುದು ವಿಪರ್ಯಾಸ ಎಂದರು.

ಮಕ್ಕಳು ಪ್ರತಿನಿತ್ಯ ಆಟದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ವ್ಯಾಯಮ ಮಾಡುವುದು ರೂಢಿಸಿಕೊಳ್ಳಬೇಕು ಅಂದಾಗಲೇ ನಿಮ್ಮ ಜೀವನ ಆರೋಗ್ಯಯುತವಾಗಿರಲಿದೆ. ನಮ್ಮ ಬಿದರಿ ಚೈಲ್ಡ್​ ಅಕಾಡೆಮಿ ವತಿಯಿಂದ ಇಂತಹ ಹಲವು ಸ್ಪರ್ಧೆಗಳನ್ನು ಹಮ್ಮಿಕೊಂಡು ಮುಂಬರುವ ದಿನಮಾನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಕ್ರೀಡೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net