ಕರೋಕೆಯೊಂದಿಗೆ ಊಟ ಸವಿಯುವ ಅವಕಾಶ

22 ckm 1 jitendra kumar
ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಜಿತೇಂದ್ರ ಕುಮಾರ್ ಮಾತನಾಡಿದರು.
Published on

ಚಿಕ್ಕಮಗಳೂರು: ಕ್ರಿಸ್ಟಲಿನ್ ಸ್ವಾದಿಷ್ಟ ರೆಸ್ಟೋರೆಂಟ್‌ನಲ್ಲಿ ಚಿಕ್ಕಮಗಳೂರಿನ ಜನತೆಗಾಗಿ ಕರೋಕೆ ಹಾಡಿನ ಜೊತೆಗೆ ಊಟ ಸವಿಯುವ ಅವಕಾಶವನ್ನು ಜೂನ್ ೨೬ರಂದು ಕಲ್ಪಿಸಲಾಗಿದೆ ಎಂದು ಹೋಟೆಲ್ ಮಾಲೀಕ ಜಿತೇಂದ್ರ ಕುಮಾರ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ ೨೬ರಂದು ಸಂಜೆ ೭ ಗಂಟೆಯಿAದ ರಾತ್ರಿ ೧೦ ಗಂಟೆಯವರೆಗೆ ಕರೋಕೆಯೊಂದಿಗೆ ಊಟ ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಓರ್ವರಿಗೆ ೩೩೩ ದರ ವಿಧಿಸಲಾಗಿದ್ದು, ಅನ್ಲಿಮಿಟೆಡ್ ಭಫೆಟ್ ನಾರ್ತ್ ಇಂಡಿಯನ್ ಊಟ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇಲ್ಲಿ ಚಿಕ್ಕಮಗಳೂರಿನ ನೂರು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉz್ದೆÃಶದಿಂದ ಈ ರೀತಿಯ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಎಷ್ಟೋ ಜನರಿಗೆ ಹಾಡುವ ಅವಕಾಶವೇ ಸಿಕ್ಕಿರುವುದಿಲ್ಲ. ಅಂಥವರು ಇಲ್ಲಿಗೆ ಬಂದು ತಮ್ಮ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಸ್ಥಳೀಯ ಸಂಗೀತಗಾರರನ್ನು ಗುರುತಿಸಬೇಕು ಹಾಗೂ ಕೆಲವರಲ್ಲಿ ವೇದಿಕೆಯ ಮೇಲೆ ಮಾತನಾಡುವಾಗ ಭಯವಿರುತ್ತದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನವಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಮೊ. ೯೪೪೮೨೭೦೫೦೭ ಅಥವಾ ೬೩೬೩೨೩೭೨೭೩ ನಂಬರ್‌ಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗಾಯಕ ರಾಯನಾಯ್ಕ, ಪ್ರಮುಖರಾದ ದರ್ಶನ್, ತೇಜಮೂರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net