

ಮೂಡಲಗಿ: ಮನುಷ್ಯ ಜೀವನದ ಕೊನೆಯ ಹಂತವಾದ ಸ್ಮಶಾನ ಕೂಡ ಒಂದು ನೆಮ್ಮದಿ ಕೇಂದ್ರವಾಗಿದ್ದು, ಉದ್ಯಾನದಂತೆ ಕಂಗೊಳಿಸುವಂತಾಗಲಿ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸುಣಧೋಳಿ ಗ್ರಾಮದ ರುದ್ರಭೂಮಿಯಲ್ಲಿ ಸ್ಥಾಪಿಸಿರುವ ಪರಮೇಶ್ವರ ಮೂರ್ತಿ ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರು ಸ್ಮಶಾನ ಭೂಮಿ ಅಭಿವೃದ್ಧಿಪಡಿಸಿ, ಮುಕ್ತಿಧಾಮವಾಗಿ ನಿರ್ಮಿಸಿ ಮಾದರಿ ಗ್ರಾಮವಾಗಲಿ ಎಂದರು.
ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಸ್ವಾಮೀಜಿ ಹಾಗೂ ಸೊಗಲದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀಶೈಲ ವಾಲಿ, ಚಂದ್ರಶೇಖರ ಗಾಣಿಗೇರ, ಭೀಮಣ್ಣ ಹೊಟ್ಟಿಹೊಳಿ, ಬಸವರಾಜ ಗಾಣಿಗೇರ, ನಾಗಪ್ಪ ಗಾಣಿಗೇರ, ಈರಣ್ಣ ಹಟ್ಟಿ, ಮಹಾದೇವ ಹಟ್ಟಿ, ಶಿವಲಿಂಗಪ್ಪ ಉಗರಗೋಳ, ಮಹಾದೇವ ವಾಲಿ ಇತರರಿದ್ದರು.