ಹುರಳಿಕುಪ್ಪಿಯಲ್ಲಿ ಸಂಭ್ರಮದ ಕಾರ್ತಿಕ ದೀಪೋತ್ಸವ

SVR DEEPOSTVA
Published on

ಸವಣೂರ: ತಾಲೂಕಿನ ಹುರಳಿಕುಪ್ಪಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಶಿಬಾರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಪ್ರಾತ:ಕಾಲ ಅಭಿಷೇಕ ಸೇರಿ ವಿವಿಧ ಧಾರ್ವಿುಕ ಕೈಂಕರ್ಯ ಕೈಗೊಳ್ಳಲಾಯಿತು.

ಸಂಜೆ ದೀಪ ಹಾಗೂ ಹೂವಿನ ಅಲಂಕಾರದಿಂದ ದೇವಸ್ಥಾನ ಶೃಂಗಾರಿಸಲಾಗಿತ್ತು. ಭಕ್ತರು ತಂಡೋಪ ತಂಡವಾಗಿ ಆಗಮಿಸಿ ದೇವರಿಗೆ ಪಣತಿ ಎಣ್ಣೆ ದೀಪ ಹಚ್ಚುವ ಮೂಲಕ ಕಾರ್ತಿಕೋತ್ಸವ ಆಚರಿಸಿದರು. ನಂತರ, ಗೋರವಜ್ಜರಿಂದ ದೋಣಿ ತುಂಬಿಸುವ ಕಾರ್ಯಕ್ರಮ, ಭಕ್ತರಿಂದ ದೀವಟಿಗಿ ಸೇವೆ ನಡೆಯಿತು.

ಬಿಎಸ್​ಎಫ್ ಯೋಧನಾಗಿ ಆಯ್ಕೆಗೊಂಡ ಗ್ರಾಮದ ಠಾಕಪ್ಪ ಬೀರಪ್ಪ ದಂಡಿನ ಅವರನ್ನು ಸನ್ಮಾನಿಸಲಾಯಿತು. ಅರ್ಚಕರಾದ ಮಲ್ಲಪ್ಪ ಪಿಳ್ಳಿ, ಅಶೋಕ ಬಿಜ್ಜೂರ, ಹೊನ್ನಪ್ಪ ಕೊಳ್ಳವರ, ಸುಭಾಸ ಮಜ್ಜಗಿ, ಮಹಾಂತೇಶ ಕೂಡಲ, ನಿಂಗಪ್ಪ ಎರೇಸಿಮಿ, ದ್ಯಾಮನಗೌಡ ದ್ಯಾಮನಗೌಡ್ರ, ನಿಂಗಪ್ಪ ಕೂಡಲ, ಮಂಜುನಾಥ ಕೊಪ್ಪದ, ನೀಲಪ್ಪ ಹಡಪದ, ಕರಿಯಪ್ಪ ಬಿಜ್ಜೂರ, ನಿಂಗಪ್ಪ ದೇವಸೂರ, ಮಂಜುನಾಥ ಸಂದ್ಲಿ, ಫಕೀರೇಶ ಪೂಜಾರ, ಸಂಜು ಸಂದ್ಲಿ, ಉಮೇಶ ದೊಡ್ಡಮನಿ, ಶ್ರೀಕಾಂತ ಆಡಿನ, ಮಲ್ಲನಗೌಡ ಇಂಗಳಗಿ, ರಾಮಣ್ಣ ಮತ್ತೂರ, ಸಂತೋಷ ಕೂಡಲ, ಗಣೇಶ ಬಿಜ್ಜೂರ, ಮಲ್ಲೇಶ ಹರಿಜನ, ಹೆಗ್ಗಪ್ಪ ಬಾಲೆಹೊಸೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net