ಕೆರೂರಲ್ಲಿ ಸಂಭ್ರಮದ ದೇವಾಂಗ ಮಹರ್ಷಿ ಭಾವಚಿತ್ರ ಮೆರವಣಿಗೆ

KERUR 14-1
ಕೆರೂರಲ್ಲಿ ದೇವಾಂಗ ಮಹರ್ಷಿ ಭಾವಚಿತ್ರ ಹಾಗೂ ಪಲ್ಲಕ್ಕಿಯ ಮೆರವಣಿಗೆ ಸಂಭ್ರಮದಿಂದ ನಡೆಯಿತು.
Published on

ಕೆರೂರ: ಪಟ್ಟಣದಲ್ಲಿ ದೇವಾಂಗ ಸಮಾಜದ ವತಿಯಿಂದ ಬುಧವಾರ ಅದ್ದೂರಿಯಾಗಿ ದೇವಲ ದೇವಾಂಗ ಮಹರ್ಷಿ ಜಯಂತ್ಯುತ್ಸವ ಆಚರಿಸಿದರು.

ಬೆಳಗ್ಗೆ ಬನಶಂಕರಿದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಂಗ ಮಹರ್ಷಿಯನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಲಾಯಿತು. ಶ್ರೀ ಬನಶಂಕರಿ ದೇವಸ್ಥಾನದ ಆವರಣದಿಂದ ವಿವಿಧ ವಾದ್ಯಮೇಳಗಳೊಂದಿಗೆ ಮಹರ್ಷಿ ಭಾವಚಿತ್ರ ಹಾಗೂ ಪಲ್ಲಕ್ಕಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಹಾಯ್ದು ದೇವಸ್ಥಾನಕ್ಕೆ ತೆರಳಿತು. ನೆಹರು ನಗರದಲ್ಲಿ ಮುದ್ದುಸಂಗಸ್ವಾಮಿಗಳು ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ನೆಹರು ನಗರದ ಯುವಕರು, ಹಿರಿಯರು ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲ ಭಕ್ತಾದಿಗಳಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಿದ್ದರು.

ಬಳಿಕ ದೇವಸ್ಥಾನದಲ್ಲಿ ಮುತ್ತೈದೆಯರಿಗೆ ಉಡಿ ತುಂಬಲಾಯಿತಲ್ಲದೆ, ವೀರಭದ್ರಸ್ವಾಮಿಗಳು ತುಳಸಿ ವಿವಾಹ ನೆರವೇರಿಸಿದರು.

ಮೆರವಣಿಗೆ ಮಾರ್ಗದುದ್ದಕ್ಕೂ ಯುವಕರು ತಳಿರು ತೋರಣಗಳಿಂದ ಸಿಂಗರಿಸಿದ್ದರೆ, ಮಹಿಳೆಯರು ಬಣ್ಣಬಣ್ಣದ ರಂಗೋಲಿ ಬಿಡಿಸಿ ಮೆರವಣಿಗೆಯನ್ನು ಬರಮಾಡಿಕೊಂಡರು. ಮಾರ್ಗಮಧ್ಯೆದಲ್ಲಿ ಭಕ್ತರು ಕಳಸಾರಥಿ ಹಿಡಿದ ಮಹಿಳೆಯರಿಗೆ ಸೇರಿ ಮೆರವಣಿಗೆಯಲ್ಲಿ ಭಾಗವಹಿಸಿದ ಯುವಕರು ಹಾಗೂ ಮಕ್ಕಳಿಗೆ ಮಜ್ಜಿಗೆ, ಸಿಹಿ ಪದಾರ್ಥ ವಿತರಿಸಿದರು.

ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ದಶರಥಪ್ಪ ಅಂಕದ, ಅರ್ಚಕ ಯಂಕಣ್ಣ ಗುಡಿಸಾಗರ, ಪಾಂಡಪ್ಪ ಅಂಕದ, ರಾಚೋಟೇಶ್ವರ ಕುದರಿ, ಕೇಶಪ್ಪ ಜಿಗೇರಿ, ಪಪಂ ಮಾಜಿ ಅಧ್ಯಕ್ಷ ಸದಾನಂದ ಮದಿ, ಪುಂಡಲೀಕ ಕ್ವಾನೂರ, ವೆಂಕಟೇಶ ಸುಟಗಲ, ವಾಸು ಸೂಳಿಕೇರಿ, ಕಾಶಿನಾಥ ಗೌಡರ, ಮಾರುತಿ ಪರದೇಶಿ, ನಾರಾಯಣ ಹುಲಮನಿ, ವಿಷ್ಣು ಅಂಕದ, ಆನಂದ ಪರದೇಶಿ, ಹನುಮಂತ ಗದ್ದನಕೇರಿ, ಗುಂಡಪ್ಪ ಕೊಡೆಕಲ್ಲ, ರವಿ ಹುಲಮನಿ, ನಿಜಗುಣಿ ಹರದೊಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net