ಚಿಮ್ಮಡದಲ್ಲಿ ಸಂಭ್ರಮದ ರಥೋತ್ಸವ

chimmad 6-1 ratha
ಚಿಮ್ಮಡ ಶ್ರೀ ರಘುನಾಥಪ್ರಿಯ ಸಾಧು ಮಹಾರಾಜರ ರಥೋತ್ಸವದಲ್ಲಿ ಪಾಲ್ಗೊಂಡು ಅಪಾರ ಭಕ್ತರು.
Published on

ಚಿಮ್ಮಡ: ಗ್ರಾಮದ ಶ್ರೀ ರಘುನಾಥ ಪ್ರಿಯ ಸಾಧು ಮಹಾರಾಜರ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬೆಳಗ್ಗೆ 6 ಗಂಟೆಗೆ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಮಹಾಪ್ರಸಾದ ನಡೆಯಿತು. ಸಂಜೆ ಸಂಭ್ರಮದಿಂದ ರಥೋತ್ಸವ ನಡೆಯಿತು. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಮಹಾರಾಷ್ಟ್ರದ ಪೂನಾ, ಮುಂಬಯಿ, ಮಿರಜ, ಸಾಂಗಲಿ, ಕೊಲ್ಹಾಪುರ ಸೇರಿ ಸಾವಿರಾರು ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಮಹಾರಾಷ್ಟ್ರದ ತಂಡದಿಂದ ಗೀತ ಗಾಯನ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರು ರಂಗೋಲಿ ಬಿಡಿಸಿದ್ದರು. ಸಾಧು ಮಹಾರಾಜರ ಮಠಕ್ಕೆ ಮರಳಿ ಮಠದ ಬಾವಿಯಲ್ಲಿ ನಡೆಯುವ ಶ್ರೀ ರಘನಾಥ ಪ್ರಿಯ ಸಾಧು ಮಹಾರಾಜರ ಜಲ ರಥೋತ್ಸವ ವೀಕ್ಷಿಸಿದ ಬಳಿಕ ಭಕ್ತರು ದೀಪ ಬೆಳಗಿಸಿ ಹರಕೆ ತೀರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net