ಸಂಭ್ರಮದ ವಾರ್ಷಿಕ ಊರೊರ್ಮೆ ಕಾರ್ಯಕ್ರಮ

kodavame kuta
Published on

ಮಡಿಕೇರಿ: ಪಾಲೂರು ಗ್ರಾಮದ ವಾರ್ಷಿಕ ಊರೊರ್ಮೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಪಾಲೂರ್ ಕೊಡವಾಮೆ ಕೂಟ ಏರ್ಪಡಿಸಿದ್ದ ೧೯ನೇ ವರ್ಷದ ಕಾರ್ಯಕ್ರಮದಲ್ಲಿ ಪಾಲೂರಿನಲ್ಲಿ ನೆಲೆಸಿರುವ ಮಂದನೆರವಂಡ, ನೆರವಂಡ, ಚೆರುವಾಳಂಡ, ಮೇಪಾಡಂಡ, ಪೊದುವಡ, ಪೈಕೇರ, ಬೊಳ್ಳಿಯಂಡ, ಬಲ್ಲಂಡ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಪಾಡಂಡ ವೇಣು ಉತ್ತಪ್ಪ, ಕೊಡವ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮುಂದಿನ ಯುವ ಪೀಳಿಗೆಗೆ ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.

ಸಸ್ಯತಳಿ ಸಂರಕ್ಷಕ ನಾಪಂಡ ಪೂಣಚ್ಚ ನಾಣಿಯಪ್ಪ ಮಾತನಾಡಿ, ಕೊಡಗಿನ ಕಾಡು ಹಣ್ಣು, ಕರಿಮೆಣಸು ಮತ್ತು ಗಂಡು ರೆಕ್ಕೆಯಿಂದ ಕಾಫಿ ಗಿಡ ಉತ್ಪತ್ತಿ ಮಾಡುವ ಬಗ್ಗೆ ಮಾಹಿತಿ ನೀಡಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಸಸ್ಯತಳಿ ಸಂರಕ್ಷಕ ನಾಪಂಡ ಪೂಣಚ್ಚ ನಾಣಿಯಪ್ಪ, ಮಾಜಿ ಸೈನಿಕ ಹಾಗೂ ಗ್ರಾಮದ ಕಾಫಿಬೆಳೆಗಾರ ಚೆರುವಾಳಂಡ ರವೀಂದ್ರ, ನಿವೃತ್ತ ಶಿಕ್ಷಕಿ ಮಂದನೆರವಂಡ ವಾಣಿ ಸೋಮಣ್ಣ, ಸಿಎಪಿಎಫ್(ಸಿಎಸ್‌ಎಫ್)ನಲ್ಲಿ ಸೇವೆ ಸಲ್ಲಿಸುತ್ತಿರುವ, ರಾಷ್ಟ್ರಪತಿ ಪದಕ ವಿಜೇತ ನೆರವಂಡ ಸಾಯಿ ಸುಬ್ಬಯ್ಯ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸದಸ್ಯರಿಗಾಗಿ ಹಲವು ಮನೋರಂಜನಾ ಸ್ಪರ್ಧೆ(ಕಳಿಕೂಟ) ಮತ್ತು ವಾಲಗ ನೃತ್ಯ ಸ್ಪರ್ಧೆಗಳು ಸಂಭ್ರಮದಿಂದ ನಡೆಯಿತು. ಇದೇ ಸಂದರ್ಭ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.

ಪಾಲೂರು ಕೊಡವಾಮೆ ಕೂಟದ ಉಪಾಧ್ಯಕ್ಷರಾದ ನೆರವಂಡ ಚೆಸ್ಲಿ ದೇವಯ್ಯ, ಪೊದುವಡ ಜಯ ಪೊನ್ನಪ್ಪ, ಸದಸ್ಯರಾದ ಮಂದನೆರವಂಡ ಲೋಕೇಶ್ ಅಯ್ಯಪ್ಪ, ಮಂದನೆರವಂಡ ಬೋಪಣ್ಣ ದಿನೇಶ್, ಮೇಪಾಡಂಡ ಸುಗುಣ, ಪೈಕೇರ ನಂದ ಉತ್ತಪ್ಪ, ನೆರವಂಡ ಸಭಿ ಗಣಪತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net