ಸಂಭ್ರಮದ ರಂಜಾನ್ ಆಚರಣೆ

11-GPT-2
ಗುಂಡ್ಲುಪೇಟೆ ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.
Published on

ಗುಂಡ್ಲುಪೇಟೆ: ಪಟ್ಟಣದಲ್ಲಿ ಗುರುವಾರ ಮುಸ್ಲಿಮರು ಸಂಭ್ರಮದಿಂದ ರಂಜಾನ್ ಆಚರಿಸಿದರು.


ಬೆಳಗ್ಗೆ ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡ ಮುಸ್ಲಿಮರು ಪರಸ್ಪರ ಶುಭಾಶಯ ಕೋರಿದರು. ಮೌಲಾನ ಮುಫ್ತಿ ಜಬೀರ್ ಸಾಬ್ ಮಾತನಾಡಿ, ಪ್ರತಿಯೊಬ್ಬರೂ ತ್ಯಾಗ ಬಲಿದಾನದ ಹಬ್ಬವಾದ ರಂಜಾನ್ ಆಚರಣೆ ಮಾಡುತ್ತಿದ್ದಾರೆ. ಉಳ್ಳವರು ಇಲ್ಲದವರಿಗೆ ಅನ್ನ, ಬಟ್ಟೆ ಹಾಗೂ ಹಣವನ್ನು ನೀಡುವ ಮೂಲಕ ಉದಾರತೆ ತೋರಬೇಕು. ರಂಜಾನ್ ಹಬ್ಬದ ಸಂದರ್ಭದಲ್ಲಿ ಒಂದು ತಿಂಗಳು ಕೈಗೊಳ್ಳುವ ಉಪವಾಸದಿಂದ ಪ್ರತಿಯೊಬ್ಬರಿಗೂ ಒಳ್ಳೆಯದಾಗುತ್ತದೆ ಎಂದರು.

ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅನಾಥರು ಹಾಗೂ ಬಡವರಿಗೆ ಆಹಾರ, ವಸ್ತ್ರಗಳನ್ನು ಕೊಡುಗೆ ನೀಡಿದರು. ಧಾರ್ಮಿಕ ಮುಖಂಡರು, ಜಾಮಿಯಾ ಮಸೀದಿ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net