ಸಂಭ್ರಮದ ಮಹಾವೀರ ಜಯಂತಿ

A celebration of Mahavira Jayanti
ತೇರದಾಳ ತಾಲೂಕಿನ ಹನಗಂಡಿ ಗ್ರಾಮದಲ್ಲಿ ಜೈನ ಸಮುದಾಯದವರಿಂದ ಭಗವಾನ ಮಹಾವೀರರ ಭಾವಚಿತ್ರ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು. ಶ್ರಾವಕ, ಶ್ರಾವಕಿಯರು ಇದ್ದರು.
Published on

ತೇರದಾಳ: ತಾಲೂಕಿನ ಹನಗಂಡಿ ಗ್ರಾಮದಲ್ಲಿ ಜೈನ ಸಮುದಾಯದವರಿಂದ ಮಹಾವೀರ ಜಯಂತಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ಜರುಗಿದವು. ಗ್ರಾಮದ ಐತಿಹಾಸಿಕ ದೇಸಾಯಿ ವಾಡೆಯಲ್ಲಿರುವ ಬಸ್ತಿಯಿಂದ ಭಗವಾನ ಮಹಾವೀರರ ಭಾವಚಿತ್ರ ಹಾಗೂ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿ ಆದಿನಾಥ ದಿಗಂಬರ ಜೈನ ಮಂದಿರದವರೆಗೆ ಸಂಚರಿಸಿತು.

ಸಂಪ್ರದಾಯದಂತೆ ಮಂದಿರದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಪ್ರಸಾದ ಸೇವನೆ ನಂತರ ಉತ್ಸವ ದೇಸಾಯಿ ವಾಡೆಗೆ ಮರಳಿತು. ದೇವಸ್ಥಾನ ಕಮಿಟಿ ಅಧ್ಯಕ್ಷ ಸುಭಾಷ ಮುರಗುಂಡಿ, ಸಮಾಜದ ಹಿರಿಯರಾದ ನಿಲೇಶ ದೇಸಾಯಿ, ಪ್ರಸನ್ನಕುಮಾರ ದೇಸಾಯಿ, ಮಹಾವೀರ ಕೊತ್ತಲಗಿ, ಚಂದ್ರಕಾಂತ ಮುರಗುಂಡಿ, ಶೀತಲ ಕಿಲೆದಾರ, ಅಶೋಕ ಮುರಗುಂಡಿ, ಶ್ರೀಕಾಂತ ಘೂಳನ್ನವರ, ಶೋಭಾ ಮುರಗುಂಡಿ, ಲಕ್ಷ್ಮೀ ದೇಸಾಯಿ ಸೇರಿ ಹನಗಂಡಿ-ಯರಗಟ್ಟಿ ಗ್ರಾಮಗಳ ಶ್ರಾವಕ, ಶ್ರಾವಕಿಯರು, ಕುಮಾರ ಕುಮಾರಿಕೆಯರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net