

ಮುಂಡರಗಿ: ಪಟ್ಟಣದ ಕೋಟೆಭಾಗದ ಶ್ರೀ ಕಾಳಿಕಾದೇವಿ ದೇವಸ್ಥಾನದ ಮಹಾಕಾರ್ತಿಕೋತ್ಸವ ಪ್ರಯುಕ್ತ ವಿಶ್ವಕರ್ಮ ಸಮಾಜದ ವತಿಯಿಂದ ಮಂಗಳವಾರ ಶ್ರೀ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ ಸೇರಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.
ದೇವಸ್ಥಾನದಲ್ಲಿ ಬೆಳಗ್ಗೆ ವಿಶ್ವಕರ್ಮ ಧ್ವಜಾರೋಹಣ, ಹೋಮ, ಪಂಚಾಮೃತ ಅಭಿಷೇಕ ಹಾಗೂ ವಿವಿಧ ಪೂಜಾ ಕೈಂಕರ್ಯ ನಡೆದವು. ನಂತರ 6 ವಟುಗಳಿಗೆ ಬ್ರಹ್ಮೋಪದೇಶ, ಉಪನಯನ ನಡೆಸಲಾಯಿತು. ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಗಳೊಂದಿಗೆ ದೇವಿ ಪಲ್ಲಕ್ಕಿ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸಂಜೆ ಮಹಾಕಾರ್ತಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ, ಸೋಮಣ್ಣ ಬಡಿಗೇರ, ನಾಗಪ್ಪ ಬಡಿಗೇರ, ಶಿವಾನಂದ ಪತ್ತಾರ, ಎಸ್.ಎಲ್. ಅರ್ಕಸಾಲಿ, ಷಣ್ಮುಖ ಕಮ್ಮಾರ, ರಾಘವೇಂದ್ರ ಬಡಿಗೇರ, ಭೀಮಣ್ಣ ಕಮ್ಮಾರ, ಮೌನೇಶ ಉಪ್ಪಿನಬೆಟಗೇರಿ, ಇತರರಿದ್ದರು.