

ಬೆಂಗಳೂರು: ಕುಖ್ಯಾತ ದರೋಡೆಕೋರ ಕುಣಿಗಲ್ ಗಿರಿಗೆ ಸಿಸಿಬಿ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಗೌಪ್ಯ ಸ್ಥಳದಲ್ಲಿ ಗಿರಿಯನ್ನ ಕರೆಸಿ ಖಡಕ್ ವಾರ್ನಿಂಗ್ ಕೊಟ್ಟಿರುವ ಪೊಲೀಸರು, 'ಎಲ್ಲಾ ಬಂದ್ ಆಗ್ಬೇಕು. ನಿನ್ನ ಆದಾಯ ಏನು? ಇವಾಗ ಏನ್ಮಾಡ್ಕೊಂಡಿದ್ಯಾ? ಹೆಚ್ಚು ಜೈಲಲ್ಲೇ ಕಳಿದಿದ್ಯಾ... ಇನ್ನೂ ನಾಚಿಕೆ ಆಗ್ತಿಲ್ವಾ?' ಎಂದು ಬೈದಿದ್ದಾರೆ. ಅಲ್ಲದೆ, 'ಮತ್ತೆ ಬಾಲ ಬಿಚ್ಚಿದ್ರೆ ಶೂಟೌಟ್ ಮಾಡ್ತೀವಿ' ಎಂದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಇದನ್ನೂ ಓದಿರಿ ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ
132ಕ್ಕೂ ಹೆಚ್ಚು ರಾಬರಿ ಪ್ರಕರಣಗಳಲ್ಲಿ ಭಾಗಿಯಾಗಿರೋ ಕುಣಿಗಲ್ ಗಿರಿ, ಕಳೆದ 13 ವರ್ಷದಲ್ಲಿ 7ವರ್ಷ ಜೈಲಿನಲ್ಲೇ ಕಾಲ ಕಳೆದಿದ್ದಾನೆ. 2011ರಿಂದ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿ ರಾಬರಿ ಕೇಸ್ನಲ್ಲಿ ಕುಣಿಗಲ್ ಗಿರಿ ಹೆಸರಿದೆ. ಸದ್ಯ ಬೆಂಗಳೂರು ಹೊರ ವಲಯಗಳಲ್ಲಿ ರಾಬರಿ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದು, ಕುಣಿಗಲ್ ಗಿರಿ ಟೀಂ ಕೂಡ ಭಾಗಿಯಾಗ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆ ಗಿರಿಗೆ ಮತ್ತೆ ಅಪರಾಧ ಪ್ರಕರಣದಲ್ಲಿ ಭಾಗಿಯಾಗದಂತೆ ಸಿಸಿಬಿ ಸ್ಪೆಷಲ್ ಸ್ಕ್ವಾರ್ಡ್ ವಾರ್ನಿಂಗ್ ಕೊಟ್ಟಿದೆ.