ಎಸ್‌ಬಿಐ ಮುಖ್ಯ ಶಾಖೆಯ ಮೂವರು ಸಿಬ್ಬಂದಿಗಳ ವಿರುದ್ಧ ವಂಚನೆ ಪ್ರಕರಣ ದಾಖಲು

cyber crime
Published on

ಮೈಸೂರು: ನಗರದ ಎಸ್‌ಬಿಐ ಮುಖ್ಯ ಶಾಖೆಯ ಮೂವರು ಸಿಬ್ಬಂದಿಗಳ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಬ್ಯಾಂಕಿನ ಸಿಬ್ಬಂದಿಗಳಾದ ರಾಕೇಶ್, ಪ್ರವೀಣ್ ಹಾಗೂ ಭಾಮಿನಿ ಕಂಚಿಗಾರ ವಿರುದ್ಧ ಆರೋಪಿಸಿ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಏನಿದು ಪ್ರಕರಣ: ಬ್ಯಾಂಕ್‌ನ ಸ್ವಾಧೀನದಲ್ಲಿದ್ದ 45,48,052 ರೂ.ಗಳ ನಾಲ್ಕು ಡಿಡಿ ಗಳನ್ನು ರದ್ದುಪಡಿಸಿ ಬ್ಯಾಂಕ್‌ನ ಪಾರ್ಕಿಂಗ್ ಖಾತೆಗೆ ವರ್ಗಾವಣೆ ಮಾಡಿ ನಂತದ ಸದರಿ ಹಣವನ್ನು ಗ್ರಾಹಕರಾದ ಕಾವ್ಯ, ಸಾನಿಯಾರಾವ್ ಹಾಗೂ ಪ್ರಭುದೇವ್ ಎಂಬುವರ ಎಸ್.ಬಿ.ಖಾತೆಗೆ ವರ್ಗಾವಣೆ ಮಾಡಿದ್ದಾರೆ. ನಂತರ ಅವರ ಅನುಮತಿ ಇಲ್ಲದೆ ಮೂವರ ಖಾತೆಯಿಂದ 30-03-2022 ರಂದು ಎಸ್‌ಬಿಐ ಮ್ಯೂಚುಯಲ್ ಫಂಡ್‌ಗೆ ಟ್ರಾನ್ಫರ್ ಮಾಡಿದ್ದಾರೆ. ನಂತರ ಇದೇ ಹಣವನ್ನ 7-04-2022 ರಂದು ಮ್ಯೂಚುವೆಲ್ ಫಂಡ್ ನಿಂದ ಹಿಂಪಡೆದು ಗ್ರಾಹಕರ ಖಾತೆಗೆ ವರ್ಗಾವಣೆ ಮಾಡಿ ಮತ್ತೆ ಬ್ಯಾಂಕಿನ ಹೆಸರಿಗೆ ನಾಲ್ಕು ಡಿಡಿಗಳನ್ನು ಮಾಡಿ ಜಮಾ ಮಾಡಿದ್ದಾರೆ. 30-03-2022 ರಿಂದ 07-04-2022 ರವರೆಗೆ 45,48,052 ರೂ. ಹಣವನ್ನು ತಾತ್ಕಾಲಿಕವಾಗಿ ದುರುಪಯೋಗಪಡಿಸಿಕೊಂಡು ಬ್ಯಾಂಕಿಗೆ ವಂಚಿಸಿ ಗ್ರಾಹಕರ ಅನುಮತಿ ಇಲ್ಲದೆ ಮ್ಯೂಚುಯಲ್ ಫಂಡ್‌ಗೆ ಇನ್ವೆಸ್ಟ್ ಮಾಡಿ ಪ್ರಾದೇಶಿಕ ಕಚೇರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net