ನಗರ ಪಾಲಿಕೆ ಆರೋಗ್ಯಾಧಿಕಾರಿ ವಿರುದ್ಧ ವಂಚನೆ ಪ್ರಕರಣ ದಾಖಲು

cybe crime
Published on

ಮೈಸೂರು: ಚೆಕ್ ದುರುಪಯೋಗ ಸಂಬಂಧ ಮಹಿಳೆ ನೀಡಿದ ದೂರಿದ ಮೇರೆಗೆ ನಗರ ಪಾಲಿಕೆ ಆರೋಗ್ಯಾಧಿಕಾರಿ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ವ್ಯವಹಾರದ ನಿಮಿತ್ತ ನೀಡಿದ್ದ ಮುಂಗಡ ಹಣದ ಚೆಕ್ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ನಗರದ ಸರಸ್ವತಿಪುರಂ ನಿವಾಸಿ ಮೀರಾ ನೀಡಿದ ದೂರಿನ ಮೇರೆಗೆ ಪಾಲಿಕೆಯ ಹಿರಿಯ ಆರೋಗ್ಯಾಧಿಕಾರಿ ವೆಂಕಟೇಶ್ ಹಾಗೂ ಹಾಸನ ನಿವಾಸಿ ಕೇಶವಮೂರ್ತಿ ಎಂಬುವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ: ಭದ್ರತೆಗಾಗಿ ನೀಡಿದ್ದ ಚೆಕ್ ಮೇಲೆ 4.50 ಲಕ್ಷ ರೂ. ನಮೂದಿಸಿಕೊಂಡು ಬೌನ್ಸ್ ಮಾಡಿ ವಂಚಿಸಲು ಯತ್ನಿಸಿದಾರೆ ಎಂದು ಆರೋಪಿಸಿ ಇಬ್ಬರ ವಿರುದ್ಧ ಮೀರಾ ಅವರು ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಇಬ್ಬರ ವಿರುದ್ದ ವಂಚನೆ ಪ್ರಕರಣ ದಾಖಲಿಸುವಂತೆ ಸರಸ್ವತಿಪುರಂ ಠಾಣಾ ಪೊಲೀಸರಿಗೆ ಆದೇಶಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net