ನಾಲ್ವರ ವಿರುದ್ಧ ಪ್ರಕರಣ ದಾಖಲು

crime
Published on

ಹುಬ್ಬಳ್ಳಿ: ವ್ಯಕ್ತಿಯೊಬ್ಬರ ಮುಂದೆ ಚಾಕು ಹಿಡಿದು ನಮ್ಮ ಬಾಸ್ ಹೇಳಿದಂತೆ 10 ಲಕ್ಷ ರೂ. ಕೊಡದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಇಲ್ಲಿಯ ಸ್ಟೇಷನ್ ರಸ್ತೆಯಲ್ಲಿ ನಡೆದಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಹ್ಮದ್‌ಫರ್ವೇಜ್ ಕುಮಟಾಕರ ಎಂಬಾತನಿಗೆ ದಾವೂದ ನದಾಫ್, ಪುಂಡಲಿಕ, ರಿಹಾನ್, ತಾಹೀರ ನ.8 ರಂದು ರಾತ್ರಿ 8.30ರ ಸುಮಾರಿಗೆ ಸ್ಟೇಷನ್ ರಸ್ತೆಯ ಚಂದ್ರಕಲಾ ಟಾಕೀಜ್ ಹತ್ತಿರ ನಿಂತಾಗ ಬಂದು ಬೆದರಿಕೆ ಹಾಕಿದ್ದರು. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net