

ಹುಬ್ಬಳ್ಳಿ: ಪತಿ ಮನೆಯವರು ವರದಕ್ಷಿಣೆ ಕಿರುಕಳ ನೀಡಿದ ಹಿನ್ನೆಲೆಯಲ್ಲಿ ಮಹಿಳೆ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ನಾಲ್ವರ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೇಹುಬ್ಬಳ್ಳಿಯ ವಿಶಾಲನಗರದ ಹೀನಾಕೌಸರ ಉರ್ಫ್ ಬಲಮಾ ಸೊಂಡಕೆ(28) ಅ. 5ರಂದು ಮೃತಪಟ್ಟಿದ್ದಾರೆ. ಮೊಹಮ್ಮದ್ ಅಜರುದ್ದಿನ್ ಸೊಂಡಕೆ, ಕರೀಮ್ ಸಾಬ್ ಸೊಂಡಕೆ, ಫರಿದಾಬಾನು ಸೊಂಡಕೆ, ಶಬ್ಬೋ ಎಂಬುವರ ವಿರುದ್ಧ ಮೃತಳ ತಂದೆ ಮೆಹಬೂಬಸಾಬ್ ನವಲೂರ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.