

ಸುಂಟಿಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೋಟೆಲ್ ಮುಂಭಾಗದಲ್ಲಿ ನಿಲ್ಲಿಸಿದ್ದ 3 ಬೈಕ್‌ಗಳಿಗೆ ಡಿಕ್ಕಿ ಹೊಡೆದು, ಮೂವರು ಗಾಯಗೊಂಡ ಪ್ರಕರಣ ಕೊಡಗರಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮೈಸೂರು ಕಡೆಯಿಂದ ಮಡಿಕೇರಿಯ ಕಡೆ ತೆರಳುತ್ತಿದ್ದ ಕೇರಳ ರಾಜ್ಯದ ನೋಂದಣಿಯ ಇನೋವಾ ಕಾರಿನಿಂದ ಅಪಘಾತ ಸಂಭವಿಸಿದೆ. ರಾಮಣ್ಣ, ವಿನೋದ್ ಸೇರಿದಂತೆ ಹಾಗೂ ಮತ್ತೊಬ್ಬರ ಬೈಕ್‌ಗಳಿಗೆ ಹಾನಿಯಾಗಿದೆ. ರಸ್ತೆ ಬದಿ ನಿಂತಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.