ದೇವನಾಳ ಬಳಿ ಕಾರು ಬೆಂಕಿಗಾಹುತಿ

KLDG 1-1
ಕಲಾದಗಿ ಸಮೀಪದ ದೇವನಾಳ ಪುನರ್ವಸತಿ ಕೇಂದ್ರ ಬಳಿ ಶುಕ್ರವಾರ ಸಂಜೆ ಕಾರು ಭಸ್ಮಗೊಂಡಿರುವುದು.
Published on

ಕಲದಾಗಿ: ಸಮೀಪದ ಬಾಗಲಕೋಟೆ- ಕಲಾದಗಿ ರಸ್ತೆಯ ದೇವನಾಳ ಪುನರ್ವಸತಿ ಕೇಂದ್ರ ಬಳಿ ಶುಕ್ರವಾರ ಸಂಜೆ ಕಾರು ಭಸ್ಮಗೊಂಡಿದೆ.
ಕಲಾದಗಿಯ ಕೃಷ್ಣಪ್ಪ ಬಡಿಗೇರ ಎಂಬುವವರಿಗೆ ಈ ಇಂಡಿಕಾ ಕಾರು ಸೇರಿದ್ದು, ಕಾರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗಿದೆ. ಕಾರಿನಲ್ಲಿದ್ದ ಕೃಷ್ಣಪ್ಪ ಬಡಿಗೇರ ಸೇರಿ ಮೌನೇಶ ಬಡಿಗೇರ, ನಾಗಲಿಂಗಪ್ಪ ಬಡಿಗೇರ, ಪ್ರಸನ್ನ ಬಡಿಗೇರ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಾಗಲಕೋಟೆಯಿಂದ ಕಲಾದಗಿಗೆ ಬರುತ್ತಿದ್ದ ವೇಳೆ ದೇವನಾಳ ಆರ್‌ಸಿ ಬಳಿ ಕಾರಿನ ಬಾನೆಟ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದವರು ಕೆಳಗಿಳಿದು ನೋಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಸುಟ್ಟು ಹೋಗಿದೆ.
ಬಾಗಲಕೋಟೆಯಿಂದ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net