ಕೊನೆಗೂ ಬಲೆಗೆ ಬಿದ್ದ ಚಿರತೆ

mkg1
Published on

ನ್ಯಾಮತಿ: ತಾಲೂಕಿನ ಗುಡ್ಡದಂಚಿನ ಗ್ರಾಮಗಳಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಗುರುವಾರ ಬೆಳಗ್ಗೆ ಮಾದಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಬಿದ್ದಿದೆ.

ಆರು ವರ್ಷದ ಗಂಡು ಚಿರತೆ ಕಳೆದೊಂದು ತಿಂಗಳಿಂದ ಆಗಾಗ ಗ್ರಾಮಗಳ ಬಳಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ವಾರದ ಹಿಂದೆ ಕುಂಕುವ ಗ್ರಾಮದಲ್ಲಿ ನಾಯಿಯನ್ನು ಕೊಂದಿತ್ತು. ನಂತರ ಕುರಿಯನ್ನು ತಿಂದುಹಾಕಿತ್ತು.

ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆಯವರು ಮೂರ‌್ನಾಲ್ಕು ಗ್ರಾಮಗಳಲ್ಲಿ ಚಿರತೆ ಸೆರೆಗಾಗಿ ಬೋನು ಅಳವಡಿಸಿದ್ದರು.

ಚಿರತೆ ಸೆರೆಯಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಸೆರೆ ಹಿಡಿದ ಚಿರತೆಯನ್ನು ಶಿವಮೊಗ್ಗ ಜಿಲ್ಲೆಯ ತಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಬಿಟ್ಟಿರುವುದಾಗಿ ಹೊನ್ನಾಳಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಚೇತನ್ ಕೆ.ಆರ್. ತಿಳಿಸಿದರು.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಬರ್ಕತ್‌ಅಲಿ, ಫಾರೆಸ್ಟರ್ ಲಿಂಗರಾಜ್, ಕೃಷ್ಣಮೂರ್ತಿ, ಚಾಂಗ್ ಮತ್ತು ಅರಣ್ಯ ವೀಕ್ಷಕ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net