ಮೂಕಬಸವೇಶ್ವರ ದೇಗುಲದಲ್ಲಿ ಸಡಗರದ ಶಿವರಾತ್ರಿ

01 LXR 3
Published on

ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಮೂಕಬಸವೇಶ್ವರ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಶಿವರಾತ್ರಿ ಮಹೋತ್ಸವ ಬುಧವಾರ ಅದ್ದೂರಿಯಾಗಿ ಆಚರಿಸಲಾಯಿತು. ಪರಮ ಪೂಜ್ಯ ಶ್ರೀ ಬಸವರಾಜ ದೇವರು ಸಾನ್ನಿಧ್ಯವಹಿಸಿ ಮಾತನಾಡಿ, ಭಗವಂತನನ್ನು ಹುಡುಕಲು ತೀರ್ಥಯಾತ್ರೆಗೆ ಹೋಗಬೇಕಿಲ್ಲ. ಹೃದಯವನ್ನು ಶುದ್ಧವಾಗಿಟ್ಟುಕೊಳ್ಳುವುದು, ಒಳ್ಳೆಯ ಕಾರ್ಯ ಮಾಡುವುದು, ಸರ್ವರಿಗೂ ಒಳ್ಳೆಯದಾಗಲಿ ಎನ್ನುವ ಮನೋಭಾವ ಹೊಂದಿದ್ದರೆ ತೀರ್ಥಯಾತ್ರೆಯ ಪುಣ್ಯ ಪ್ರಾಪ್ತವಾಗುತ್ತದೆ ಎಂದರು.

ಧಾರವಾಡ ಪ್ರೌಢಶಾಲೆಯ ಪ್ರಾಚಾರ್ಯ ಎನ್.ಎನ್. ಸವಣೂರ ಮಹಾಶಿವರಾತ್ರಿ ಮಹಿಮೆ ವಿವರಿಸಿದರು. ಡಾ. ನಾಗರಾಜ್ ದ್ಯಾವನಕೊಪ್ಪ ಮಾತನಾಡಿದರು. ದಾನಿಗಳನ್ನು ಸನ್ಮಾನಿಸಲಾಯಿತು. ಗದಗನ ಶ್ರೀ ಪುಟ್ಟರಾಜ ಗವಾಯಿಗಳ ಮಠದ ಶಿಷ್ಯ ಬಳಗದಿಂದ ಶಿವ ಜಾಗರಣೆ ಕಾರ್ಯಕ್ರಮ ಜರುಗಿತು. ಡಿ.ಆರ್. ಗೋಂದಕರ ಅಧ್ಯಕ್ಷತೆ ವಹಿಸಿದ್ದರು. ಎಸ್.ಪಿ. ಬಳಿಗಾರ, ರಾಮಣ್ಣ ಲಮಾಣಿ, ಯಲ್ಲಪ್ಪ ತಳವಾರ, ಅಂಬರೀಷ ಹುಲಗೂರ, ಆರ್.ಎನ್. ತೇಲ್ಕರ್, ಮಂಜು ಗಡ್ಡೆನವರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net