

ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಆಸಕ್ತಿವಹಿಸಿ ಮುಂದೆ ಬಂದಿದ್ದು, ಒಟ್ಟು 1747.37 ಕೋಟಿ ರೂ. ಅಂದಾಜಿನ 35 ಯೋಜನೆಗಳಿಗೆ ಸರ್ಕಾರ ಅಸ್ತು ಎಂದಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ನಡೆದ 35ನೇ ರಾಜ್ಯ ಮಟ್ಟದ ಏಕಗಾವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ತೀರ್ಮಾನವಾಗಿದ್ದು, ಹೊಸದಾಗಿ 4904 ಉದ್ಯೋಗಗಳ ಸೃಷ್ಟಿಯಾಗಲಿವೆ.
15 ರಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 25 ಹೊಸ ಯೋಜನೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದ್ದು, ಇವುಗಳಿಂದ 567.43 ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 2443 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 2 ಯೋಜನೆಗೆ ಅನುಮೋದನೆ ನೀಡಿದ್ದು, ಇದರಿಂದ 230.83 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಆಯುಕ್ತೆ ಗುಂಜನ್ ಕೃಷ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಸ್ತಾವಿತ ಯೋಜನೆಗಳು
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್
ಹೂಡಿಕೆ- 170 ಕೋಟಿ ರೂ., ಉದ್ಯೋಗ- 770
ಪ್ರಭಾರ್ಥಿ ಎಥ್ನಾಲ್ ಪ್ರೈ. ಲಿಮಿಟೆಡ್
ಹೂಡಿಕೆ- 150 ಕೋಟಿ ರೂ., ಉದ್ಯೋಗ- 93
ಶ್ರೀ ವೇದ್ ಪ್ರಕಾಶ್ ಡಿಸ್ಟಿಲರಿ ಪೆಟ್ರೋ ಕೆಮಿಕಲ್ಸ್ ಪ್ರೈ. ಲಿಮಿಟೆಡ್
ಹೂಡಿಕೆ- 149 ಕೋಟಿ ರೂ., ಉದ್ಯೋಗ-72
ಅವಂಟಿನಿಯಾ ಆಗ್ರೋವೆಟ್ ಪ್ರೈ. ಲಿಮಿಟೆಡ್
ಹೂಡಿಕೆ- 138.36 ಕೋಟಿ ರೂ., ಉದ್ಯೋಗ-65
ಎಸ್.ಕೆ. ಸ್ಟೀಲ್ಟೆಕ್ ಪ್ರೈ. ಲಿಮಿಟೆಡ್
ಹೂಡಿಕೆ- 120 ಕೋಟಿ ರೂ., ಉದ್ಯೋಗ-190
ಬೆಂಗಳೂರು ಮೆಟಲರ್ಜಿಕಲ್ಸ್ ಪ್ರೈ. ಲಿಮಿಟೆಡ್
ಹೂಡಿಕೆ- 100.29 ಕೋಟಿ ರೂ., ಉದ್ಯೋಗ-300
ಶ್ರೀ ಲಕ್ಷ್ಮೀ ಸ್ಟೀಲ್ ಸಪ್ಲೈಯರ್ಸ್
ಹೂಡಿಕೆ-64.28 ಕೋಟಿ ರೂ., ಉದ್ಯೋಗ- 250
ಸೂರ್ಯ ಕೋಲ್ಡ್ ಸ್ಟೋರೇಜ್
ಹೂಡಿಕೆ- 56.38 ಕೋಟಿ ರೂ., ಉದ್ಯೋಗ-70
ಗೋಪಾಲನ್ ಎಂಟರ್‌ಪ್ರೈಸಸ್(ಲಾಜಿಸ್ಟಿಕ್ಸ್)
ಹೂಡಿಕೆ- 48.46 ರೂ., ಉದ್ಯೋಗ-300