ವಂಚನೆ ಜಾಲದಿಂದ 98 ಸಾವಿರ ಕಳೆದುಕೊಂಡ ಉದ್ಯಮಿ

Published on

ಮೈಸೂರು: ವಾಟ್ಸ್ ಆಪ್‌ನಲ್ಲಿ ಬಂದ ಸಂದೇಶದಲ್ಲಿ ಬ್ಯಾಂಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಖಾಸಗಿ ಕಂಪನಿ ಉದ್ಯೋಗಿ 98,800 ರೂ. ಕಳೆದುಕೊಂಡಿದ್ದಾರೆ.

ಆಲನಹಳ್ಳಿ ಬಡಾವಣೆಯ ಬಸವೇಶ್ವರ ಬ್ಲಾಕ್ ವಾಸಿಯಾಗಿರುವ ಆಟೋಮೋಟಿವ್ ಆಕ್ಸಲ್ನಲ್ಲಿ ಕಾರ್ಯ ನಿರ್ವಾಹಕ ವ್ಯವಸ್ಥಾಪಕ ಆಗಿರುವ ಸುರೇಶ್ ಹಣ ಕಳೆದುಕೊಂಡವರು.

ದೇಶದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ನ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸುರೇಶ್ ಅವರ ವಾಟ್ಸ್ ಆಫ್‌ಗೆ ಸಂದೇಶ ಬಂದಿದೆ. ಇದನ್ನು ನಂಬಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದಾದ ಕೇವಲ ಒಂದು ಗಂಟೆಯಲ್ಲಿಯೇ 90 ಸಾವಿರ ರೂ. ಹಾಗೂ 9800 ರೂ. ಬೇರೆ ಖಾತೆಗೆ ವರ್ಗಾವಣೆ ಆಗಿದೆ. ಮೊಬೈಲ್‌ಗೆ ಬಂದ ಹಣ ಕಡಿತಗೊಂಡ ಸಂದೇಶ ನೋಡಿದ ತಕ್ಷಣ ಸುರೇಶ್ ಅವರು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ವಂಚನೆ ಅಗಿರುವುದು ಗೊತ್ತಾಗಿದೆ. ಬಳಿಕ ಈ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹಣ ವಾಪಸ್ ಕೊಡಿಸುವಂತೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net