ಗ್ರಾಹಕರ ಜೀಬಿಗೆ ಹೊರೆ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಿದ್ದಾಪುರದಲ್ಲಿ ವಿವಿಧ ಬಗೆಯ ಹೂಗಳನ್ನು ಮಾರಾಟ ಮಾಡುತ್ತಿರುವುದು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಿದ್ದಾಪುರದಲ್ಲಿ ವಿವಿಧ ಬಗೆಯ ಹೂಗಳನ್ನು ಮಾರಾಟ ಮಾಡುತ್ತಿರುವುದು.
Published on

ಸಿದ್ದಾಪುರ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಹೂ, ಹಣ್ಣುಗಳ ಖರೀದಿ ಜೋರಾಗಿತ್ತು. ಕಿರಾಣಿ ಅಂಗಡಿಗಳು, ಸ್ಟೇಷನರಿ ಶಾಪ್‌ಗಳು, ಬಟ್ಟೆ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುತ್ತಿದೆ. ಮಾರುಕಟ್ಟೆಗೆ ಅಪಾರ ಪ್ರಮಾಣದಲ್ಲಿ ಹೂ, ಹಣ್ಣುಗಳು ಆಮದಾಗಿದ್ದು, ದರ ಗಗನಕ್ಕೆರಿದೆ. ಚೆಂಡು ಹೂ 1ಕೆ.ಜಿಗೆ 100 ರೂ, ಮಲ್ಲಿಗೆ 1 ಮಳಕ್ಕೆ 50 ರೂ. ರೇಷ್ಮೆ ಹೂ ಬಳ್ಳಿ ಜೋಡಿಗೆ 50, ಬಾಳೆ ದಿಂಡು, ಕುಂಬಳಕಾಯಿ, ಸೇಬು, ದಾಳಿಂಬೆ, ದ್ರಾಕ್ಷಿ ಹಣ್ಣುಗಳ ಬೆಲೆ ಏರಿಕೆ ಕಂಡಿವೆ. ಗ್ರಾಹಕರ ಜೀಬಿಗೆ ಹೊರೆಯಾದರೂ ಹಬ್ಬದ ಪೂಜೆ ಹಾಗೂ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net