

ಶಿವಮೊಗ್ಗ: ನಗರದ ಗಾಂಧಿಬಜಾರ್ ಅಂಗಡಿಯೊಂದರ ಬೀಗ ಮುರಿದು ಒಳ ನಗ್ಗಿರುವ ಕಳ್ಳರು 1.10 ಲಕ್ಷ ರೂ. ನೋಟಿನ ಬಂಡಲ್ ಮತ್ತು ಬೆಳ್ಳಿ ನಾಣ್ಯಗಳನ್ನು ಕಳವು ಮಾಡಿದ್ದಾರೆ.
ಗಾಂಧಿಬಜಾರ್‌ನ ವೀರಭದ್ರಪ್ಪ ಆ್ಯಂಡ್ ಸನ್ಸ್ ಪ್ರಾವಿಷನ್ ಸ್ಟೋರ್‌ನಲ್ಲಿ ಕಳ್ಳತನವಾಗಿದೆ. ಮಾಲೀಕರು ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಕ್ಯಾಶ್ ಡ್ರಾಗಳು ಓಪನ್ ಆಗಿದ್ದವು. ಪರಿಶೀಲಿಸಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಪಕ್ಕದ ಕಟ್ಟಡದಿಂದ ಅಂಗಡಿಯ ಮೂರನೇ ಮಹಡಿಗೆ ನುಗ್ಗಿರುವ ಕಳ್ಳರು ಗ್ರಿಲ್ ಗೇಟ್‌ನ ಬೀಗ ಒಡೆದು ಅಂಗಡಿಯೊಳಗೆ ನುಗ್ಗಿದ್ದಾರೆ.
ಸಿಸಿಟಿವಿ ವಯರ್ ತುಂಡು ಮಾಡಿ, ಕ್ಯಾಮರಾಗಳನ್ನು ಬೇರೆಡೆಗೆ ತಿರುಗಿಸಿ ನೆಲಮಹಡಿಯಲ್ಲಿದ್ದ ಕ್ಯಾಶ್ ಕೌಂಟರ್‌ನಲ್ಲಿ ಹಣ ಕಳವು ಮಾಡಿದ್ದಾರೆ. ಕ್ಯಾಶ್ ಡ್ರಾದಲ್ಲಿದ್ದ 10 ಮತ್ತು 50 ರೂ.ನ ನೋಟ್‌ಗಳ ಬಂಡಲ್ ಕಳುವಾಗಿದೆ. 10 ಸಾವಿರ ರೂ. ಮೌಲ್ಯದ 200 ಗ್ರಾಂ ತೂಕದ ಬೆಳ್ಳಿ ನಾಣ್ಯ ಕಳ್ಳತನ ಮಾಡಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.